ಮಂಗಳೂರು ಗಲಭೆಗೆ ಯು.ಟಿ ಖಾದರ್ ಪ್ರಚೋದನೆಯೇ ಕಾರಣ: ಮಾಜಿ ಸಚಿವರ ವಿರುದ್ಧ ಎಫ್.ಐ.ಆರ್

Advt_NewsUnder_1
Advt_NewsUnder_1

ಮಂಗಳೂರು: ಮಂಗಳೂರಿನಲ್ಲಿ ನಡೆದ ಗಲಬೆ ಮತ್ತು ಅನಪೇಕ್ಷಿತ ಘಟನೆ, ಇದರಿಂದ ಉಂಟಾದ ಎರಡು ಪ್ರಾಣಹಾನಿಗೆ ಮಾಜಿ ಸಚಿವ ಯು.ಟಿ ಖಾದರ್ ಅವರ ಪ್ರಚೋದನಾಕಾರಿ ಭಾಷಣವೇ ಕಾರಣ ಎಂದು ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಮಾಜಿ ಸಚಿವರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಪೌರತ್ವ ಕಾಯ್ದೆ ವಿರೋಧಿ ಕಿಚ್ಚು ಮಂಗಳೂರಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಹೆಚ್ಚಾಗಿತ್ತು. ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ಜೊತೆಗೆ ಗೋಲಿಬಾರ್ ಕೂಡ ನಡೆಸಿದ್ದರು. ಈ ವೇಳೆ ಇಬ್ಬರು ಬಲಿಯಾಗಿದ್ದರು. ಇಂತಹ ಪ್ರಕರಣಕ್ಕೆ ಮುಖ್ಯಕಾರಣ ಮಾಜಿ ಸಚಿವ ಯು ಟಿ ಖಾದರ್ ಪ್ರಚೋದನಾಕಾರಿ ಭಾಷಣ ಎಂಬುದಾಗಿ ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಆರೋಪಿಸಿ ಪೊಲೀಸರಿಗೆ ದೂರು ನೀಡಿತ್ತು.
ಈ ದೂರನ್ನು ಆಧರಿಸಿ, ಇದೀಗ ಮಾಜಿ ಸಚಿವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.