ಸೋಜಾ ಇಲೆಕ್ಟ್ರಾನಿಕ್ಸ್‌ಗೆ ಬೆಳ್ಳಿಹಬ್ಬ ಸಂಭ್ರಮ ವರ್ಷವಿಡೀ ವಿಭಿನ್ನ ರೀತಿಯಲ್ಲಿ ಮಾರಾಟ- ಗ್ರಾಹಕರ ಮೇಳ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತಾಲೂಕಿನ ಪ್ರಪ್ರಥಮ ಇಲೆಕ್ಟ್ರಾನಿಕ್ಸ್ ವ್ಯಾಪಾರ ಮಳಿಗೆ ಮತ್ತು ಪೀಠೋಪಕರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮಳಿಗೆ ಸೋಜಾ ಇಲೆಕ್ಟ್ರಾನಿಕ್ಸ್ 1995 ರಲ್ಲಿ ಪ್ರಾರಂಭಗೊಂಡ ತಾಲೂಕಿನ ಅತ್ಯಂತ ಹಿರಿಯ ಮಳಿಗೆಯಾಗಿದ್ದು ಈ ವರ್ಷ ಬೆಳ್ಳಿಹಬ್ಬ ವರ್ಷಕ್ಕೆ ಕಾಲಿಟ್ಟಿದೆ.

ವಿಶ್ವಾಸಯುತ ವ್ಯವಹಾರ, ಗ್ರಾಹಕರಿಗೆ ನಗು ಮೊಗದ ಸಂತೃಪ್ತಿಯ ಸೇವೆ ನೀಡುವ ಮೂಲಕ ಈಗಾಗಲೇ ಮನೆಮಾತಾಗಿರುವ ಸೋಜಾ ಸಂಸ್ಥೆಯು ತನ್ನ ಬೆಳ್ಳಿಹಬ್ಬ ವರ್ಷವನ್ನು ಗ್ರಾಹಕರ ಜೊತೆಗೂಡಿ ಅತ್ಯಂತ ಯಶಸ್ವಿಯಾಗಿ ವರ್ಷಪೂರ್ತಿ ಸಂಘಟಿಸಲು ನಿರ್ಧರಿಸಿದೆ. ಅದರ ಮೊದಲ ಭಾಗವಾಗಿ ಸಂಸ್ಥೆಯಲ್ಲಿ ಪ್ರಖ್ಯಾತ ಸ್ಯಾಂಸಂಗ್ ಕಂಪನಿಯಿಂದ ಹೊಸಸ್ಟಕಾನ್ ಉತ್ಪನ್ನಗಳ “ಇಯರ್‌ಎಂಡ್” ಸೇಲ್ಸ್ ಆರಂಭವಾಗಿದೆ. ಪ್ರಖ್ಯಾತ ಇನ್ನೊಂದು ಸಂಸ್ಥೆಯಾದ ಬಟರ್‌ಫ್ಲೈ ಕಂಪೆನಿಯಿಂದ ತನ್ನ ಉತ್ಪನ್ನಗಳಿಗೆ ಭಾರೀ ಕಾಂಬಿ ಆಫರ್‌ಗಳ ಮೂಲಕ ವಸ್ತುಗಳ ಖರೀದಿಗೆ ವ್ಯವಸ್ಥೆ ಮಾಡಿದೆ. ಸೋಜಾ ಸಂಸ್ಥೆಯಲ್ಲಿ ಪ್ರತೀ ಖರೀದಿಗೂ ಬಹುಮಾನ ವ್ಯವಸ್ಥೆ ಮಾಡಿದೆ. ಷರತ್ತುಗಳಿಗೊಳಪಟ್ಟ ಖರೀದಿಗಳಿಗೆ ಬೆಳ್ಳಿಹಬ್ಬದ ಪ್ರಯುಕ್ತ ಬೆಳ್ಳಿ ನಾಣ್ಯ ಕೊಡುಗೆ ಕೂಡ ಆರಂಭವಾಗಿದೆ. ಮುಂದಕ್ಕೆ ವರ್ಷಪೂರ್ತಿ ವಿವಿಧ ಹಬ್ಬಗಳ ಜೊತೆಗೆ ಕಂಪೆನಿಗಳ ವತಿಯಿಂದ ನಿರಂತರವಾಗಿ ಸಂಭ್ರಮಾಚರಣೆ, ಮಾರಾಟ ಹಬ್ಬ ಹಮ್ಮಿಕೊಳ್ಳಲು ನಿರ್ದರಿಸಲಾಗಿದೆ.

ಇದೀಗ ಕ್ರಿಸ್ಮಸ್ ಮತ್ತು ಹೊಸವರ್ಷದ ಅಂಗವಾಗಿ ಡಿ. 19 ರಿಂದ ಜನವರಿ 4 ರ ವರೆಗೆ ವಿಶೇಷ ಆಫರ್ ಮಾರಾಟ ಇದೆ ಎಂದು ಸಂಸ್ಥೆಯ ಆಡಳಿತ ಪಾಲುದಾರ ಅಲ್ಫೋನ್ಸ್ ಫ್ರಾಂಕೋ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.