ಮುಂಡಾಜೆ: ವಸತಿ ಶಾಲೆಯಲ್ಲಿ ನಾರಾಯಣ ಗುರು ದರ್ಶನ ನಾಟಕ ಪ್ರದರ್ಶನ

Advt_NewsUnder_1
Advt_NewsUnder_1
Advt_NewsUnder_1

ನಾಟಕ ಪ್ರದರ್ಶನ ಮತ್ತು ಉಪನ್ಯಾಸ ಕಾರ್ಯಕ್ಯಮ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ. ಪೀಠ ಮಂಗಳೂರು ವಿ.ವಿ ಹಾಗೂ ಕನ್ನಡ ಸಂಘ ಸ.ಪ್ರ.ದ..ಕಾಲೇಜು ಪುಂಜಾಲಕಟ್ಟೆ ಇವುಗಳ ಸಹಯೋಗದಲ್ಲಿ ಡಿ.19ರಂದು ಉಪನ್ಯಾಸ ಹಾಗೂ ನಾಟಕ ಪ್ರದರ್ಶನ ಕಾರ್ಯ ಕ್ರಮವು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಹೊಸಂಗಡಿ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳು ಸಾಹಿತಿ ಅರವಿಂದ ಚೊಕ್ಕಾಡಿಯವರ ನಿರ್ದೇಶನದಲ್ಲಿ ನಾರಾಯಣ. ಗುರು ದರ್ಶನ ಎಂಬ ನಾಟಕವನ್ನು ಪ್ರದರ್ಶಿಸಿದರು. ಅರವಿಂದ. ಚೊಕ್ಕಾಡಿಯವರು ನಾರಾಯಣ ಗುರುಗಳ ವೈಚಾರಿಕತೆ ಕುರಿತು ಉಪನ್ಯಾಸ. ನೀಡಿದರು. ನಾರಾಯಣ ಗುರುಗಳ ಆಧ್ಯಾತ್ಮಿಕ ಧೋರಣೆಗಳು ಅವರ ಚಿಂತನೆಗಳು ವಾಸು ದೇವಾಷ್ಟಕದಲ್ಲಿ ಮೈತಳೆದಿವೆ. ಇದನ್ನು ವೇದಾಂತ ತತ್ವ ಗಳ ಮೂಲಕ ಅರ್ಥ ಮಾಡಿಕೊಳ್ಳಲು ಬೇಕು. ಅಸ್ಪೃಶ್ಯತಾ-ನಿವಾರಣೆಯ ಮೂಲಕ ಸಮಾಜ ಸುಧಾರಣೆ ಮಾಡಿದ ನಾರಾಯಣ ಗುರು ಸ್ತ್ರೀಯರ ಸ್ವಾತಂತ್ರ್ಯ ದ ಕುರಿತು ಆಸ್ಥೆ ಹೊಂದಿದ್ದರು ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಿನ್ಸಿಪಾಲ್ ಪ್ರೊ.ಗಣಪತಿ ಭಟ್ ಕುಳಮರ್ವ ಅವರು ನಾರಾಯಣ ಗುರುಗಳು ಶ್ರೇಷ್ಠ ಹಾಗೂ ಪ್ರಾತಃ ಸ್ಮರಣೀಯರು ಎಂದು ಹೇಳಿದರು.ಡಾ.ಕೃಷ್ಣಾನಂದ.ಪಿ.ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪನ್ಯಾಕರಾದ ಗಾಯತ್ರಿ.ರಕ್ಷತ ಮಾತನಾಡಿದರು. ಪ್ರಾಧ್ಯಾಪಕರಾದ ರಾಜೇಶ್ವರಿ, ಖಂಡೋಜಿ, ಸುಜಿತ್, ಚಂದ್ರ ಶೇಖರ, ಜನಾರ್ಧನ, ಸುಪ್ರೀತ, ರೀಟಾ ಉಪಸ್ಥಿತರಿದ್ದರು.ಐ.ಕ್ಯೂ.ಎಸಿ ಸಂಯೋಜಕ. ಪ್ರೊ.ರವಿಶಂಕರ್ ಸಹಕರಿಸಿದರು. ಶ್ರಾವ್ಯಾ ಸ್ವಾಗತಿಸಿ, ಚಿತ್ರಾ ಧನ್ಯವಾದವಿತ್ತರು. ಶಾಲಿನಿ ಮತ್ತು ಜ್ಯೋತಿ ಪ್ರಾರ್ಥಿಸಿ, ರಂಜಿತಾ ನಿರೂಪಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.