ಶ್ರೀಕಾಂತ ಬಾಳ್ತಿಲ್ಲಾಯಗೆ ಡಾಕ್ಟರೇಟ್ ಪದವಿ

Advt_NewsUnder_1
Advt_NewsUnder_1

ಧರ್ಮಸ್ಥಳ: ತನ್ನ ಸ್ಥಾಪನೆಯ ಶತಮಾನದ ಸಂಭ್ರಮದಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತಾಲೂಕಿನ ಕನ್ಯಾಡಿ, ಧರ್ಮಸ್ಥಳದ ನಿವಾಸಿ, ಶ್ರೀಕಾಂತ ಬಾಳ್ತಿಲ್ಲಾಯ ಪಿಎಚ್‌ಡಿ (ಡಾಕ್ಟರೇಟ್) ಪದವಿ ಗಳಿಸಿದ್ದಾರೆ. ವಿಶ್ವವಿದ್ಯಾನಿಲಯದ ಸಂಸ್ಕೃತ ಅಧ್ಯಯನ ವಿಭಾಗದಲ್ಲಿ ಅವರು ತಮ್ಮ ಪಿಎಚ್‌ಡಿ ಅಧ್ಯಯನ ನಡೆಸಿದ್ದಾರೆ.
ವಿಶ್ವವಿದ್ಯಾನಿಲಯದ ಸಂಸ್ಕೃತ ಪ್ರಾಧ್ಯಾಪಕ ಹಾಗೂ ಡೀನ್ ಆಫ್ ಸ್ಟೂಡೆಂಟ್ಸ್ ಆಗಿರುವ ಪ್ರೊಫೆಸರ್ ಬಿ ಎ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ ಇವರು ಮಂಡಿಸಿದ ಮಹಾಭಾರತೇ ಸನತ್ಸುಜಾತೀಯಸ್ಯ ವಿಮರ್ಶಾತ್ಮಕಂ ಅಧ್ಯಯನಮ್ ಎಂಬ ಪ್ರೌಢ ಮಹಾಪ್ರಬಂಧಕ್ಕೆ ವಿಶ್ವವಿದ್ಯಾನಿಲ ಯವು ಪಿಹೆಚ್‌ಡಿ ಪದವಿ ಘೋಷಿಸಿದೆ. ಕನ್ಯಾಡಿಯ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ, ಉಜಿರೆಯ ಶ್ರೀ ದ.ಮಂ. ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಇವರು, ಉಡುಪಿಯ ಎಸ್‌ಎಂಎಸ್‌ಪಿ ಸಂಸ್ಕೃತ ಮಹಾವಿದ್ಯಾಲಯ ಹಾಗೂ ಶ್ರೀ ಪೂರ್ಣಪ್ರಜ್ಞ ಕಾಲೇಜಿನಲ್ಲಿ ತಮ್ಮ ಉನ್ನತ ಅಧ್ಯಯನ ನಡೆಸಿದ್ದಾರೆ. ಇವರು ಕನ್ಯಾಡಿ-ಧರ್ಮಸ್ಥಳದ ಪುರೋಹಿತರಾದ ರಾಮ ಬಾಳ್ತಿಲ್ಲಾಯ ಹಾಗೂ ಶ್ರೀಮತಿ ಸುನಂದ ದಂಪತಿಯ ಹಿರಿಯ ಪುತ್ರ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.