ತಾಲೂಕಿನ 40 ಸಹಕಾರಿ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಗದಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ 2020 ಜ.1ರಿಂದ ಮಾ.31ರವರೆಗೆ ಆಡಳಿತ ಮಂಡಳಿ ಅವಧಿ ಪೂರ್ಣಗೊಂಡ ಭೂ ಅಭಿವೃದ್ಧಿ ಬ್ಯಾಂಕ್, ಲ್ಯಾಂಪ್ಸ್, ಕೃಷಿಪತ್ತಿನ ಸಹಕಾರಿ ಸಂಘಗಳು, ಹಾಲು ಉತ್ಪಾದಕರ ಸಹಕಾರಿ ಸಂಘಗಳು, ಸಹಕಾರಿ ಸಂಘಗಳು ಸೇರಿದಂತೆ ಒಟ್ಟು 43 ವಿವಿಧ ಸಹಕಾರಿ ಸಂಸ್ಥೆಗಳಿಗೆ ಚುನಾವಣೆ ನಡೆಸಲು ದಿನಾಂಕವನ್ನು ನಿಗದಿಗೊಳಿಸಲಾಗಿದ್ದು, ಚುನಾವಣಧಿಕಾರಿಗಳನ್ನು ನೇಮಿಸಲಾಗಿದೆ.

ಬೆಳ್ತಂಗಡಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್- ಜ.25 ( ಚುನಾವಣಾಧಿಕಾರಿ ಆದೇಶಕ್ಕೆ ಬಾಕಿ), ಕೃಷಿ ಪತ್ತಿನ ಸಹಕಾರಿ ಸಂಘಗಳಾದ ಹತ್ಯಡ್ಕ-ಜ.27 (ಜಗದೀಶ್ ಪಿಡಿಒ ಶಿಶಿಲ) ಮುಂಡಾಜೆ-ಜ.25 (ಅಕ್ಷಯ್ ದ್ವಿ.ದ.ಸ ಉಪನಿರ್ದೇಶಕರ ಕಚೇರಿ ಪಶುಸಂಗೋಪನಾ ಇಲಾಖೆ ಮಂಗಳೂರು), ವೇಣೂರು- ಜ. 19 (ಸುಕನ್ಯಾ ಸಹಕಾರಿ ಅಭಿವೃದ್ಧಿ ಅಧಿಕಾರಿ ಬೆಳ್ತಂಗಡಿ), ಕೊಕ್ಕಡ- ಜ.27 (ಸುಕನ್ಯಾ ಸಹಕಾರ ಅಭಿವೃದ್ಧಿ ಅಧಿಕಾರಿ ಬೆಳ್ತಂಗಡಿ), ಕೊಯ್ಯೂರು- ಜ.25 (ನವೀನ್ ಎಂ.ಎಸ್ ದ್ವಿ.ದ.ಸ ಸ.ಸಂ.ಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರ ಕಚೇರಿ ಮಂಗಳೂರು), ನಿಡ್ಲೆ- ಜ.27 (ಪುರುಷೋತ್ತಮ ಪಿಡಿಒ ಅಂಡಿಂಜೆ), ತಣ್ಣೀರುಪಂತ-ಜ.27 (ನಾರಾಯಣ ನಾಯ್ಕ ಪ್ರ.ದ.ಸ ಬಿಇಒ ಕಚೇರಿ ಬೆಳ್ತಂಗಡಿ), ಉಜಿರೆ- ಜ.19 (ಎನ್.ಜೆ ಗೋಪಾಲ್ ಪ್ರ.ದ.ಸ ಉಪನಿಬಂಧಕರ ಕಚೇರಿ ಮಂಗಳೂರು), ಬಂಗಾಡಿ- ಜ.5 (ವಿಲಾಸ್ ಪ್ರ.ದ.ಸ ಉಪನಿಬಂಧಕರ ಕಚೇರಿ ಮಂಗಳೂರು), ಪೆರಾಡಿ- ಜ.19 (ಪ್ರವೀಣ್‌ಕುಮಾರ್ ಪ್ರ.ದ.ಸ ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ), ನಾರಾವಿ- ಜ.19 (ವಿಲಾಸ್ ಪ.ದ.ಸ ಬಿಇಒ ಕಚೇರಿ ಬೆಳ್ತಂಗಡಿ), ಪದ್ಮುಂಜ-ಜ.25 (ನಾರಾಯಣ ನಾಯ್ಕ ಪ್ರ.ದ.ಸ ಬಿಇಒ ಕಚೇರಿ ಬೆಳ್ತಂಗಡಿ), ಬೆಳಾಲು- ಜ.19 (ಸಂಜೀವ ನಾಯ್ಕ ಕಾರ್ಯದರ್ಶಿ ಗ್ರಾ.ಪಂ ಮುಂಡಾಜೆ), ಮಚ್ಚಿನ- ಜ.5 (ನವೀನ್ ಎಂ.ಎಸ್ ದ್ವಿ.ದ.ಸ ಸ.ಸಂಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರ ಕಚೇರಿ ಮಂಗಳೂರು), ಸುಲ್ಕೇರಿಮೊಗ್ರು- ಜ.19 (ಬಿ.ವಿ ಪ್ರತಿಮಾ ಸಹಕಾರ ಅಭಿವೃದ್ಧಿ ಅಧಿಕಾರಿ ಸ.ಸಂ ಉಪನಿರ್ದೇಶಕರ ಕಚೇರಿ ಮಂಗಳೂರು).

ಹಾಲು ಉತ್ಪಾದಕರ ಸಹಕಾರಿ ಸಂಘಗಳಾದ ಕರಿಮಣೇಲು- ಡಿ.26 (ಶಿವಲಿಂಗಯ್ಯ ಸಹಕಾರಿ ಸಂಘಗಳ ಹಿರಿಯ ಅಧೀಕ್ಷಕರು ಮಂಗಳೂರು), ಪೆರಿಂಜೆ- ಡಿ.29 (ಶಿವಲಿಂಗಯ್ಯ ಸಹಕಾರಿ ಸಂಘಗಳ ಹಿರಿಯ ಅಧೀಕ್ಷಕರು ಮಂಗಳೂರು), ಕಾಶಿಪಟ್ಣ- ಡಿ.29 (ನವೀನ್ ದ್ವಿ.ದ.ಸ ಸ.ಸಂ.ಗಳ ಲೆಕ್ಕಪರಿಶೋಧನಾ ಕಚೇರಿ ಮಂಗಳೂರು), ಲಾಯಿಲ- ಜ.4 (ವಿಲಾಸ್ ಪ್ರ.ದ.ಸ ಉಪನಿಬಂಧಕರ ಕಚೇರಿ ಮಂಗಳೂರು), ಉರುವಾಲು- ಜ.5 (ಸುಕನ್ಯಾ ಸಹಕಾರ ಅಭಿವೃದ್ಧಿ ಅಧಿಕಾರಿ ಬೆಳ್ತಂಗಡಿ), ನಿಡ್ಲೆ- ಡಿ.27 (ನವೀನ್ ಎಂ.ಎಸ್ ದ್ವಿ.ದ.ಸ ಸ.ಸಂ.ಗಳ ಲೆಕ್ಕಪರಿಶೋಧನಾ ಕಚೇರಿ ಮಂಗಳೂರು), ಮೊಗ್ರು- ಡಿ.28 (ಬಿ.ನಾಗೇಂದ್ರ ಅಧೀಕ್ಷಕರು ಸ.ಸಂ. ಸಹಾಯಕ ನಿಬಂಧಕರ ಕಚೇರಿ ಮಂಗಳೂರು), ಪುರಿಯ- ಜ.24 (ಬಿ.ನಾಗೇಂದ್ರ ಅಧೀಕ್ಷಕರು ಸ.ಸಂ. ಸಹಾಯಕ ನಿಬಂಧಕರ ಕಚೇರಿ ಮಂಗಳೂರು), ಪಣಕಜೆ- ಡಿ.28 (ತ್ರಿವೇಣಿ ರಾವ್ ಸಹಕಾರ ಅಭಿವೃದ್ಧಿ ಅಧಿಕಾರಿ ಬಂಟ್ವಾಳ), ಕಡಿರುದ್ಯಾವರ- ಡಿ.25 (ಎನ್.ಜೆ ಗೋಪಾಲ್ ಉಪನಿಬಂದಕರ ಕಚೇರಿ ಮಂಗಳೂರು), ಓಡಿಲ್ನಾಳ- ಡಿ. 28 (ನವೀನ್ ಎಂ.ಎಸ್ ದ್ವಿ.ದ.ಸ ಸ.ಸಂ.ಗಳ ಲೆಕ್ಕಪರಿಶೋಧನಾ ಇಲಾಖೆ ಮಂಗಳೂರು), ಸವಣಾಲು- ಡಿ.28 (ಶಿವಲಿಂಗಯ್ಯ ಸಹಕಾರ ಸಂಘಗಳ ಹಿರಿಯ ನಿರೀಕ್ಷಕರು ಮಂಗಳೂರು), ಮಿತ್ತಬಾಗಿಲು- ಜ.7 (ಶಿವಲಿಂಗಯ್ಯ ಸಹಕಾರ ಸಂಘಗಳ ಹಿರಿಯ ನಿರೀಕ್ಷಕರು ಮಂಗಳೂರು), ಮಲವಂತಿಗೆ- ಡಿ.29 (ಬಿ.ವಿ ಪ್ರತಿಮಾ ಸಹಕಾರಿ ಅಭಿವೃದ್ಧಿ ಅಧಿಕಾರಿ ಮಂಗಳೂರು), ನಾಳ- ಜ.5 (ಶಿವಯ್ಯ ಸಹಕಾರ ಸಂಘಗಳ ಹಿರಿಯ ನಿರೀಕ್ಷಕರು ಮಂಗಳೂರು), ಬಳಂಜ- ಜ.11 (ನವೀನ್ ಎಂ.ಎಸ್ ದ್ವಿ.ದ.ಸ ಸ.ಸಂ.ಗಳ ಲೆಕ್ಕಪರಿಶೋಧನಾ ಕಚೇರಿ ಮಂಗಳೂರು)

ನೆರಿಯ ಗ್ರಾಹಕರ ಸಹಕಾರಿ ಸಂಘ- ಫೆ.26 (ನಾಗೇಂದ್ರ ಬಿ. ಅಧೀಕ್ಷಕರು ಸ.ಸಂ. ಸಹಾಯಕ ನಿಬಂಧಕರ ಕಚೇರಿ ಮಂಗಳೂರು), ಅರಸಿಮಕ್ಕಿ ವಿವಿದ್ದೋದ್ದೇಶ ಸಹಕಾರ ಸಂಘ- ಫೆ.8 (ನವೀನ್ ಎಂ.ಎಸ್ ದ್ವಿ.ದ.ಸ ಸ.ಸಂ.ಗಳ ಲೆಕ್ಕಪರಿಶೋಧನಾ ಕಚೇರಿ ಮಂಗಳೂರು), ಉಜಿರೆ ಮಹಿಳಾ ವಿವಿದೋದ್ದೇಶ ಸಹಕಾರ ಸಂಘ- ಫೆ.16 (ಶಿವಲಿಂಗಯ್ಯ ಎಂ. ಸಹಕಾರ ಸಂಘಗಳ ಹಿರಿಯ ನಿರೀಕ್ಷಕರು ಸ.ಸಂ.ಗಳ ಕಚೇರಿ ಮಂಗಳೂರು), ಕರಾಯ ಮೂರ್ತೆದಾರರ ವಿವಿದೋದ್ದೇಶ ಸೇವಾ ಸಹಕಾರ ಸಂಘ- ಫೆ.27 (ನವೀನ್ ಎಂ.ಎಸ್ ದ್ವಿ.ದ.ಸ ಸ.ಸಂ.ಗಳ ಲೆಕ್ಕಪರಿಶೋಧನಾ ಕಚೇರಿ ಮಂಗಳೂರು).

ಬೆಳ್ತಂಗಡಿ ಲ್ಯಾಂಪ್ಸ್ ಸೊಸೈಟಿ, ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘ ರಿಟರ್‌ನಿಂಗ್ ಅಧಿಕಾರಿ ಆದೇಶಕ್ಕೆ ಬಾಕಿಯಿದೆ. , ಬಾರ್ಯ- ಈ ಸಂಘವನ್ನು ಬಾರ್ಯ ಮತ್ತು ತೆಕ್ಕಾರು ಎಂದು ಎರಡು ಹೊಸ ಪ್ಯಾಕ್ಸ್‌ಗಳಾಗಿ ನೋಂದಾಯಿಸಿರುವುದರಿಂದ ಜನವರಿ-2020ರ ಮಾಹೆಯಲ್ಲಿ ಚುನಾವಣೆ ಇರುವುದಿಲ್ಲ. ವಿಜಯ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಗುರುವಾಯನಕೆರೆಗೆ ವಿಲಾಸ್ ಪ.ದ.ಸ ಉಪನಿರ್ದೇಶಕರ ಕಚೇರಿ ಮಂಗಳೂರು ಇವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದ್ದು, ಚುನಾವಣಾ ದಿನ ನಿಗದಿಯಾಗಿಲ್ಲ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.