ಶಿಬಾಜೆ ದೇವಸ್ಥಾನದ ಹುಂಡಿಯೊಳಗೆ ರೂ.30-40 ಸಾವಿರ ಹಾಳಾದ ನೋಟುಗಳು

ಶಿಬಾಜೆ : ಇಲ್ಲಿಯ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹುಂಡಿಯಲ್ಲಿ ಭಕ್ತರು ಹಾಕಿದ ಕಾಣಿಕೆ ಹಣವನ್ನು ಡಿ.13ರಂದು ಏಣಿಕೆ ಮಾಡಿದಾಗ ಇದರಲ್ಲಿ ಸುಮಾರು ರೂ.30 ರಿಂದ 40 ಸಾವಿರ ರೂ.ಗಳ ನೋಟು ಸಂಪೂರ್ಣ ಹಾಳಾಗಿದ್ದು, ಎಣಿಕೆ ಮಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಕಂಡು ಬಂದಿದೆ.
ಮುಜರಾಯಿ ಇಲಾಖೆಗೆ ಸೇರಿದ ಈ ದೇವಸ್ಥಾನದಲ್ಲಿ ಕಳೆದ ಎಪ್ರಿಲ್ ತನಕ ವ್ಯವಸ್ಥಾಪನಾ ಸಮಿತಿ ಆಸ್ತಿತ್ವದಲ್ಲಿತ್ತು. ಅವರ ಅವಧಿ ಮುಗಿದ ನಂತರ ಇಲ್ಲಿಗೆ ಆಡಳಿತಾಧಿಕಾರಿಗಳ ನೇಮಕವಾಗಲಿಲ್ಲ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಗೆ ಊರವರು ಹಲವು ಬಾರಿ ಫೋನ್ ಮಾಡಿದ ಬಳಿಕ ಕಳೆದ ಡಿ.4ರಂದು ಗ್ರಾ.ಪಂ ಪಿಡಿಒ ಜಯರಾಜ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಯಿತು.
ಅವರ ಉಪಸ್ಥಿತಿಯಲ್ಲಿ ಅದುವರೆಗೆ ಸಂಗ್ರಹವಾದ ಕಾಣಿಕೆ ಹುಂಡಿಗಳ ಎಣಿಕೆಯನ್ನು ಮಾಡಲಾಯಿತು. ಹುಂಡಿಯಲ್ಲಿ ರೂ.1,52,400 ದೊರಕಿತ್ತು. ಸುಮಾರು ರೂ.30ರಿಂದ ರೂ.40 ಸಾವಿರದಷ್ಟು ನೋಟುಗಳನ್ನು ಎಣಿಕೆ ಮಾಡಲು ಸಾಧ್ಯವಾಗಲಿಲ್ಲ. ಮಳೆಯಿಂದಾಗಿ ಸುಮಾರು ಎಂಟು ತಿಂಗಳಲ್ಲಿ ಹುಂಡಿಯೊಳಗಿದ್ದ ನೋಟುಗಳು ಸಂಪೂರ್ಣ ಹಾಳಾಗಿ ಹೋಗಿತ್ತು. ಇದು ಸರಕಾರಕ್ಕೆ ಆದ ನಷ್ಟವಾಗಿದ್ದು, ಇದಕ್ಕೆ ಯಾರು ಹೊಣೆ ಎಂದು ಭಕ್ತರು ಪ್ರಶ್ನಿಸುತ್ತಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.