ಬೆಳ್ತಂಗಡಿ ತಾಲೂಕು ಮುಸ್ಲಿಂ ಒಕ್ಕೂಟದಿಂದ ಮಹತ್ವದ ಸಭೆ

Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕು ಮುಸ್ಲಿಂ ಒಕ್ಕೂಟದಿಂದ ತಾಲೂಕಿನ ಸರ್ವ ಮುಸ್ಲಿಂ ಸಂಘಟನೆಗಳ ನಾಯಕರ ಸಮ್ಮುಖದಲ್ಲಿ ಕೇಂದ್ರ ಸರಕಾರದ ಜನ ವಿರೋಧಿ ಕಾಯ್ದೆಯಾದ NRC ಮತ್ತು CAB(CAA)ಕಾಯ್ದೆಯ ವಿರುದ್ಧ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸುವುದೆಂದು ಇಂದು ಬೆಳ್ತಂಗಡಿಯ ಜೆ.ಎಂ.ಎಫ್ ಸಭಾಭವನದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಈ ಸಭೆಯಲ್ಲಿ ಬೆಳ್ತಂಗಡಿ ತಾಲ್ಲೂಕಿನ ಸರ್ವ ಜಮಾಅತಿನ ಎಲ್ಲಾ ನಾಗರಿಕರು ಪಾಲ್ಗೊಳ್ಳುವುದೆಂದು ತೀರ್ಮಾನಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ತಾಲೂಕು ಮುಸ್ಲಿಂ ಒಕ್ಕೂಟ ಇದರ ಅಧ್ಯಕ್ಷರಾದ ಬಿ,ಎ,ನಝೀರ್ ಬೆಳ್ತಂಗಡಿ ವಹಿಸಿದ್ದರು.

ಬಿ.ಎಂ ಹಮೀದ್ ಉಜಿರೆ, ಚಾರ್ಮಾಡಿ ಹಸನಬ್ಬ, ಅರೆಕಲ್ ಮಮ್ಮಿಕುಞ್ಞಿ, ಬದ್ರುದ್ದೀನ್ ಜಾರಿಗೆ ಬೈಲ್, ಅಬ್ದುಲ್ ರಹಮಾನ್ ಕಕ್ಕಿಂಜೆ, ಹಕೀಮ್ ಬಲಿಪಾಯ, ಸಾದಿಕ್ ಮಲೆಬೆಟ್ಟು ,ಎಸ್.ಎಂ ಕೋಯಾ ಉಜಿರೆ, ಮುಸ್ತಫ ಗುರುವಾಯನಕೆರೆ, ಅಶ್ರಫ್ ನೆರಿಯ, ನಝೀರ್ ಅಝಹರಿ ಬೊಲ್ಮಿನಾರ್, ಅಬ್ಬಾಸ್ ಬಟ್ಲಡ್ಕ ,ಅಹಮ್ಮದ್ ಡೆಲ್ಮಾ, ರಾಝಿಯುದ್ದೀನ್ ಮದ್ದಡ್ಕ, ಮೆಹಬೂಬ ಸಂಜೆಯ ನಗರ, ರಫಿ ಮಾಜಿ ಸೈನಿಕರು, ಸಲೀಂ ಎಸ್ ಕೆ, ಹೈದರ್ ನೀರ್ ಸಾಲ್, ಅಕ್ಬರ್ ಬೆಳ್ತಂಗಡಿ, ರಫೀಕ್ ಜಿ, ಕೆರೆ, ಆಲಿಯಬ್ಬ ಪುಲಾಬೆ, ಖಾಲಿದ್ ಪುಲಾಬೆ, ನವಾಜ್ ಷರೀಫ್ ಕಟ್ಟೆ, ಉಪಸ್ಥಿತರಿದ್ದರು. ಎಸ್,ಎಂ, ಕೋಯ ಕಿರಾತ್ ನೊಂದಿಗೆ ಪ್ರಾರಂಭಿಸಿ, ನಝೀರ್ ಅಝ್ ಹರಿ ರವರ ದುವಾದೊಂದಿಗೆ ಸಮಾಪ್ತವಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.