ಬೆನಕ ಹೆಲ್ತ್ ಸೆಂಟರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಉಜಿರೆ ಇದಕ್ಕೆ ಸರಕಾರದ ವಿಶೇಷ ಮಂಡಳಿಯಿಂದ ದೊರಕಿದ ಕಾಯಕಲ್ಪ ಪ್ರಶಸ್ತಿ ಹಸ್ತಾಂತರ ಕಾರ್ಯಕ್ರಮ ಹಾಗೂ ಬೆನಕ ಹೋಂ ಹೆಲ್ತ್ ಕೇರೆ ಸೇವೆಯ ಉದ್ಘಾಟನೆ ಇಂದು ಸಂಜೆ ಆಸ್ಪತ್ರೆಯ ಕ್ಯಾಂಪಸ್ ನಲ್ಲಿ ನಡೆಯಿತು.
ಪ್ರಶಸ್ತಿ ಹಸ್ತಾಂತರ ವನ್ನು ಶಾಸಕ ಹರೀಶ್ ಪೂಂಜ ನಡೆಸಿಕೊಟ್ಟರು.ಹೋಂ ಹೆಲ್ತ್ ಕೇರ್ ಉದ್ಘಾಟನೆಯನ್ನು ಸೇವಾ ಭಾರತಿ ಕನ್ಯಾಡಿಯ ಅಧ್ಯಕ್ಷ ವಿನಾಯಕ ರಾವ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಬೆನಕ ಹೆಲ್ತ್ ಸೆಂಟರ್ ಮೆಡಿಕಲ್ಡೈರೆಕ್ಟರ್ ಡಾ.ಕೆ ಗೋಪಾಲಕೃಷ್ಣ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯೆ ನಮಿತಾ ಕೆ ಪೂಜಾರಿ, ತಾ.ಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿಧರ ಎಂ ಕಲ್ಮಂಜ, ಉಹಿರೆ ಗ್ರಾ.ಪಂ ಅಧ್ಯಕ್ಷ ಶ್ರೀದರ ಪೂಜಾರಿ, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಭಾಗವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಬಿ ರಾಧಾಕೃಷ್ಣ ಶೆಟ್ಟಿ, ಜಯರಾಮ ಗೌಡ, ಪುಷ್ಪಾ ಆರ್ ಶೆಟ್ಟಿ, ಜಯಲಕ್ಷ್ಮೀ ನಾಗೇಶ್ ಭಾಗಿಯಾಗಿದ್ದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್ ಜಿ ಭಟ್ ಸ್ವಾಗತಿಸಿದರು. ಜನರಲ್ ಮೆನೇಜರ್ ದೇವಸ್ಯ ಪ್ರಸ್ತಾವನೆಗೈದರು.