HomePage_Banner_
HomePage_Banner_

ಬಳಂಜ: ವಿವಿಧ ಕ್ಷೇತ್ರದ 10 ಮಂದಿ ಸಾಧಕರಿಗೆ ಸನ್ಮಾನ

ಬಳಂಜ: ಬಳಂಜ ವಾಲಿಬಾಲ್ ಕ್ಲಬ್ ಇದರ ಆಶ್ರಯದಲ್ಲಿ ಡಿ.14 ರಂದು ಶ್ರೀ ದೈವ ಕೊಡಮಣಿತ್ತಾಯ ಆವರಣದಲ್ಲಿ ಜರುಗಿದ ತಾಲೂಕು ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 10ಮಂದಿ ಸಾಧಕರನ್ನು ಬಳಂಜ ವಾಲಿಬಾಲ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಅಂತಾರಾಷ್ಟೀಯ ಮಟ್ಟದ ತ್ರೋಬಾಲ್ ಆಟಗಾರ್ತಿ ಕು| ಆಶಾ ಪೂಜಾರಿ, ಜಾನಪದ ಕಲಾವಿದ ಸತೀಶ್ ದೇವಾಡಿಗ, ಸಾಹಿತ್ಯ ಕ್ಷೇತ್ರದ ಸಾಧಕ ಕಿರಣ್ ರೈ ಬಳಂಜ, ಸಮಾಜ ಸೇವಕ ಪದ್ಮನಾಭ ಕುಲಾಲ್ ಬಳಂಜ ರವರನ್ನು ಹಾಗೂ ಕಳೆದ 2 ವರ್ಷದಿಂದ ವಾಲಿಬಾಲ್ ತಂಡದ ಮಾಲಕತ್ವ ವಹಿಸಿ ಸಹಕರಿಸಿದ ರಾಕೇಶ್ ಹೆಗ್ಡೆ ಬಳಂಜ ಇಕೋಪ್ರೆಶ್ ಎಂಟರ್‌ಪ್ರೈಸಸ್, ಸಂತೋಷ್.ಪಿ.ಕೋಟ್ಯಾನ್ ಬಳಂಜ, ಕೋಟ್ಯಾನ್ ರಾಕರ್‍ಸ್, ಸಚಿನ್ ಶೆಟ್ಟಿ ಕುರೆಲ್ಯ ಕ್ಯಾಂಪಸ್ ವಾರಿಯರ್‍ಸ್, ರಂಜಿತ್ ಹೆಚ್.ಡಿ ಸುಧಾಮ, ಸುವರ್ಣ ಸ್ಟೈಕರ್‍ಸ್, ವಿಶ್ವನಾಥ ಹೊಳ್ಳ, ಮಜ್ಜೇನಿಬೈಲು ಬ್ರದರ್‍ಸ್ ಹಾಗೂ ವಿನು ಬಳಂಜ ದಿಮಿಸೋಲೆ ತಂಡ ಇವರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.