ಬೆಳ್ತಂಗಡಿಯ ಗೇರುಕಟ್ಟೆಯಲ್ಲಿ ಪತಿಯಿಂದಲೇ ಪತ್ನಿಯ ಕೊಲೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1


ಕಳಿಯ: ಇಲ್ಲಿನ ಗೇರುಕಟ್ಟೆ ಎಂಬಲ್ಲಿ ಪತಿಯು ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ಡಿ. 17 ರಂದು ಮಧ್ಯಾಹ್ನ ಬೆಳಕಿಗೆ ಬಂದಿದೆ.
ಮೃತರಾದವರನ್ನು ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ತಸ್ಲೀಮ (30ವ.)  ಎಂಬವರೆಂದು ಗುರುತಿಸಲಾಗಿದೆ.
ಈಕೆಯನ್ನು ಬೆಳ್ತಂಗಡಿ ತಾಲೂಕು ಗೇರುಕಟ್ಟೆ ಉಮರ್ ಫಾರೂಕ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿದ್ದು ದಂಪತಿಗೆ ನಾಲ್ಕು ವರ್ಷ ಪ್ರಾಯದ ಒಂದು ಹೆಣ್ಣು, ಒಂದೂವರೆ ವರ್ಷ ಪ್ರಾಯದ ಒಂದು ಗಂಡು ಮಕ್ಕಳು ಇದ್ದಾರೆ.  

ಶೌಚಾಲಯದಲ್ಲಿದ್ದ ಮೃತದೇಹ:

ತಸ್ಲೀಮಾ ಅವರ ಮೃತದೇಹ ಶೌಚಾಲಯದಲ್ಲಿ ಗೋಚರಿಸಿದ್ದು, ತಲೆಯ ಹಿಂಭಾಗ ಮತ್ತು ದೇಹದಲ್ಲಿ ಅಲ್ಲಲ್ಲಿ ಗಾಯದ ಗುರುತುಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪತಿ, ಬೆಳ್ತಂಗಡಿ ಠಾಣೆಯಲ್ಲಿ ರಡಿ ಶೀಟರ್ ಕೂಡ ಆಗಿರುವ ಪತಿ ಉಮರ್ ಫಾರೂಕ್ ಅವರೇ ಈ ಕೃತ್ಯವೆಸಗಿರುವುದು ಬಹುತೇಕ ಖಚಿತವಾಗಿದೆ.


ಆರೋಪಿ ವಿರುದ್ಧ 7 ಕೇಸುಗಳು:

ಈಗಾಗಲೇ ಆರೋಪಿ ಉಮರ್ ಫಾರೂಕ್ ವಿರುದ್ಧ ಗಾಂಜಾ ಮತ್ತು ಒಂದು ಕೊಲೆಯತ್ನ ಸೇರಿದಂತೆ 7 ಕೇಸುಗಳು ಬೆಳ್ತಂಗಡಿ, ಪುಂಜಾಲಕಟ್ಟೆ, ಮಂಗಳೂರು ಕಂಕನಾಡಿ ಠಾಣೆಗಳಲ್ಲಿ ವಿಚಾರಣೆ ಹಂತದಲ್ಲಿದೆ. ಇತ್ತೀಚೆಗಷ್ಟೇ ಗಾಂಜಾ ಸಾಗಾಟ ಪ್ರಕರಣದಲ್ಲಿ ಫಾರೂಕ್ ಅವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರೆಂದು ಮಾಹಿತಿ ಇದೆ.
ಮಧ್ಯಾಹ್ನದವರೆಗೆ ಗೇರುಕಟ್ಟೆ ಪರಿಸರಲ್ಲಿದ್ದ ಆರೋಪಿ:
ಪತಿ ಪತ್ನಿ ಜಗಳ ನಿತ್ಯ ನಡೆಯುತ್ತಿತ್ತು. ದಂಪತಿ ತಮ್ಮಿಬ್ಬರು ಮಕ್ಕಳ ಜೊತೆ ಚಿಕ್ಕಪ್ಪ ಅಬೂಬಕ್ಕರ್ ಅವರ ಮನೆಯ ತಾಗಿಕೊಂಡೇ ಇರುವ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದರು. ಈ ಕೊಲೆ ಕೃತ್ಯ ಕಳೆದ ರಾತ್ರಿಯೇ ನಡೆದಿರುವ ಸಾಧ್ಯತೆ ಇದೆ. ಪತಿ ಉಮರ್ ಫಾರೂಕ್ ಪತ್ನಿಗೆ ಹಲ್ಲೆ ನಡೆಸಿ, ತಲೆಗೆ ಗಂಭೀರ ಗಾಯವಾಗುವಂತೆ ಹಲ್ಲೆ ನಡೆಸಿದ್ದು, ಬೆಡ್‍ಶೀಟ್‍ನಲ್ಲಿ ಮೂಗಿಗೆ ಒತ್ತಿ ಕೃತ್ಯವೆಸಗಿರುವ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಬಾತ್‍ ರೂಮ್‍ನಲ್ಲಿ ಬಿದ್ದಿದ್ದ ಆಕೆಯ ಮೃತದೇಹದ ಬಳಿ ಬೆಡ್‍ಶೀಟ್ ಕೂಡ ಪತ್ತೆಯಾಗಿದೆ. ಪತಿ ಫಾರೂಕ್ ಅವರನ್ನು ಇಂದು ಮಧ್ಯಾಹ್ನವರೆಗೂ ಗೇರುಕಟ್ಟೆಯಲ್ಲಿ ಕಂಡವರಿದ್ದಾರೆ.
ಸದ್ದು ಕೇಳದ್ದರಿಂದ ಪಕ್ಕದ ಮನೆಯವರಿಗೆ ಮೂಡಿದ ಸಂದೇಹ:
ಚಿಕ್ಕಪ್ಪ ಅಬೂಬಕ್ಕರ್ ಅವರಿಗೆ ಮತ್ತು ಫಾರೂಕ್ ಮನೆಯವರು ಅಕ್ಕಪಕ್ಕದವರಾಗಿದ್ದರೂ ಮಾತುಕತೆ ಇರಲಿಲ್ಲ. ಅತ್ತ ಪಕ್ಕದ ಮನೆಯಲ್ಲಿ ಇದ್ದ ತಸ್ಮೀಮಾ ಅವರ ಯಾವುದೇ ಸದ್ದು ಕೇಳದೇ ಇದ್ದುದರಿಂದ ಸಂಶಯಗೊಂಡು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ವೇಳೆಗಾಗಲೇ ಆರೋಪಿ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಕಳಿಯ ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ವಕ್ಫ್ ಬೋರ್ಡ್ ಸದಸ್ಯ ಅಬ್ದುಲ್‌‌ ಕರೀಂ  ಗೇರುಕಟ್ಟೆ. ಮೊದಲಾದವರು ಭೇಟಿ ನಿಡಿದ್ದಾರೆ.

ಪೊಲೀಸ್ ಇಲಾಖೆಯಿಂದ ಬಂಟ್ವಾಲ ಉಪವಿಭಾಗದ ಎಎಸ್ ಪಿ ಡಾ. ಸೈಡುಲ್ಲಾ ಅಡಾವತ್, ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ, ಬೆಳ್ತಂಗಡಿ ಎಸ್.ಐ ನಂದಕುಮಾರ್ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.