HomePage_Banner_
HomePage_Banner_

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ “ಕಾಳಜಿ ರಿಲೀಫ್ ಫಂಡ್” 1  ಲಕ್ಷ ರೂ. ದೇಣಿಗೆ


ಕಳೆದ ಆಗಸ್ಟ್ ತಿಂಗಳಲ್ಲಿ ತಾಲೂಕಿನಲ್ಲಿ ನಡೆದಿದ್ದ ನೆರೆಯ ಪರಿಣಾಮವಾಗಿ ಸಂತ್ರಸ್ತರಾದವರಿಗೆ ಪರಿಹಾರ ನೀಡುವ ಸಲುವಾಗಿ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ಆಡಳಿತ ಮೊಕ್ತೇಸರ ಶ್ರೀ ಸುಭಾಶ್ಚಂದ್ರ ಸುರ್ಯಗುತ್ತು ಇವರು ಒಂದು ಲಕ್ಷ ರೂ. ಗಳ ನಿಧಿಯನ್ನು ತಾಲೂಕಿನ ಶಾಸಕ ಹರೀಶ್ ಪೂಂಜ ಅವರ “ಕಾಳಜಿ ರಿಲೀಫ್ ಫಂಡ್” ಖಾತೆಗೆ ನೀಡಿದರು. 
ಸುರ್ಯದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಮಾರಂಭದ ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ ಅವರಿಗೆ ನಿವೃತ ಡಿವೈಎಸ್‍ಪಿ ಆಗಿರುವ ಸುಭಾಶ್ಚಂದ್ರ ಅವರು ಪರಿಹಾರ ಮೊತ್ತ ಹಸ್ತಾಂತರಿಸಿದರು.

ಈ ಸಂದರ್ಭ ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ ಗೌಡ ಸಹಿತ ಗಣ್ಯರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.