ಶಿಬಾಜೆ: ಸಂತ್ರಸ್ತ 8 ಮಂದಿ ಮಕ್ಕಳ ಪೋಷಕರಿಗೆ ತಲಾ 10 ಸಾವಿರ ನೆರವು ಘೋಶಿಸಿದ ಶಾಸಕ ಹರೀಶ್ ಪೂಂಜ

ಶಿಬಾಜೆ ಗ್ರಾಮದ ಪೆರ್ಲ ಸರಕಾರಿ ಶಾಲೆಯಲ್ಲಿ ನಡೆದ ಘಟನೆಯಲ್ಲಿ ಅಸ್ಪತ್ರೆ ಸೇರಿದ 8 ಮಂದಿ ವಿದ್ಯಾರ್ಥಿಗಳ ಆರೈಕೆಗೆ ಪೂರಕವಾಗಿ ಮತ್ತು ಅವರ ಮನೆಯವರು ಇಷ್ಟೂ ದಿನಗಳಲ್ಲಿ ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿರುವ ವಿಚಾರ ಮನಗಂಡು ಶಾಸಕ ಹರೀಶ್ ಪೂಂಜ ಅವರು ಅವರ ಕುಟುಂಬಗಳಿಗೆ ತಲಾ 10 ಸಾವಿರ ರೂ. ಗಳಂತೆ ವೈಯುಕ್ತಿಕ ಪರಿಹಾರ ಘೋಶಿಸಿದ್ದಾರೆ.

ಡಿ. 16 (ಇಂದು) ಶಿಬಾಜೆ ಗ್ರಾಮದ ಮೊಟ್ಟೆತಡ್ಕ ಶ್ರೀ ದುರ್ಗಾ ಪರಮೇಶ್ವರೀ ದೇವರ ಸನ್ನಿದಾನದವರೆಗೆ ಭಕ್ತರು, ವಿದ್ಯಾರ್ಥಿ ಪೋಷಕರು ಪಾದಯಾತ್ರೆಯಲ್ಲಿ ತೆರಳಿ, ನೈಜ ಆರೋಪಿಗಳ ಪತ್ತೆಗೆ ಮತ್ತು ಅವರಿಗೆ ತಕ್ಕ ಶಿಕ್ಷೆಯಾಗಬೇಕೆಂಬ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಶಾಲೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು. ಆ ಮೂಲಕ ನೈತಿಕ ಸ್ಥೈರ್ಯ ಕಳೆದುಕೊಂಡಿರುವ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರಿಗೆ ವಿಶೇಷ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಶಾಸಕರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಜೊತೆ ಮುಂದುವರಿದು ಮಾತನಾಡಿದ ಶಾಸಕರು, ಶಿಕ್ಷಣ ಇಲಾಖೆಯಿಂದಲೂ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.