ಪ್ರಕೃತಿ ವಿಕೋಪಕ್ಕೆ ಹಾನಿಯಾದ ಬಂದಾರು ವಿಶ್ವನಾಥ ಗೌಡರ ಮನೆ ದುರಸ್ತಿಗೊಳಿಸಿದ ರಾಜಕೇಸರಿ ತಂಡ

ಬೆಳ್ತಂಗಡಿ:ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಮಸ್ಯೆ ಎದುರಿಸುತ್ತಿದ್ದ ಬಂದಾರು ಗ್ರಾಮದ ಪಾಪು ದಡಕ ನಿವಾಸಿ ಅರ್ಹವಾದ ವಿಶ್ವನಾಥ್ ಗೌಡ ಅವರ ಮನೆಯ ಬಳಿ ರಾಜಕೇಸರಿ ವತಿಯಿಂದ ಡಿ.14 ರಂದು ಶ್ರಮ ಸೇವೆ ನಡೆಯಿತು.

ಪ್ರಕೃತಿ ವಿಕೋಪದಿಂದ ಅವರ ಮನೆಯ ಮೇಲ್ಚಾವಣಿಯ ಪಕ್ಕಾಸು ರಿಪ್ ಹಂಚು ಗಳಿಗೆ ಹಾನಿ ಉಂಟಾಗಿತ್ತು ತೀರಾ ಆರ್ಥಿಕ ಸಮಸ್ಯೆಯಿಂದ ಇರುವ ಈ ಕುಟುಂಬದವರಿಗೆ ಸರಿಪಡಿಸಲು ಅಸಾಧ್ಯವಾಗಿತ್ತು ಈ ವಿಷಯವನ್ನು ಮನಗೊಂಡ ರಾಜ ಕೇಸರಿಯ ಸಂಸ್ಥಾಪಕರಾದ ದೀಪಕ್ ಜಿ ಇವರ ನೇತೃತ್ವದಲ್ಲಿ ರಾಜಕೇಸರಿ ದಿಡುಪೆ ಇದರ ಅಧ್ಯಕ್ಷರಾದ ಪ್ರದೀಪ್ ಗೌಡ ಇವರ ಮುಂದಾಳತ್ವದಲ್ಲಿ ಶ್ರಮ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ರಾಜ ಕೇಸರಿ ದಿಡುಪೆ ಇದರ ಸಂಚಾಲಕರಾದ ಸಂಪತ್ ಇದರ ಕಾರ್ಯದರ್ಶಿಯಾದ ಚೇತನ್ ಹಾಗೂ ಸದಸ್ಯರಾದ ವಿಜಯ್, ಸುದರ್ಶನ್, ಪ್ರತಾಪ್ ಗೌಡ, ಪ್ರಶಾಂತ್, ಗಣೇಶ್, ಪ್ರಸನ್ನ, ಚರಣ್, ಚೇತನ್, ಹರೀಶ್, ಸುಜಯ್, ಹರ್ಷಿತ್, ಸಂತೋಷ್, ಶರತ್. ಗಿರಿಧರ್, ರೋಹಿತ್, ನವೀನ್, ಪ್ರಶಾಂತ್ಆಚಾರ್ಯ, ಸಂದೀಪ್, ಕಾರ್ತಿಕ್, ನಿತೇಶ್, ಉಪಸ್ಥಿತರಿದ್ದರು. ಈ ಕುಟುಂಬದ ಮನೆ ಸಾಮಾಗ್ರಿಗಳನ್ನು ರಾಜ ಕೇಸರಿಯ ಕಾರ್ಯಕರ್ತರು ಬರಿಸಿ ಕೆಲಸವನ್ನು ನಿರ್ಮಿಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.