ಬೆಳ್ತಂಗಡಿ: ಇಲ್ಲಿನ ಸಂತೆಕಟ್ಟೆ ಮಹತ್ಮಾಗಾಂಧಿ ವಾಣಿಜ್ಯ ಸಂಕೀರ್ಣ, ನಗರ ಪಂ ಕಟ್ಟಡದಲ್ಲಿ ಮೊಬೈಲ್ ಪ್ಯಾಲೇಸ್ ಎಕ್ಸ್ಕ್ಲೂಸಿವ್ ಮೊಬೈಲ್ ಶೋ ರೂಂ ಸೇಲ್ಸ್& ಸರ್ವೀಸ್ ಶುಭಾರಂಭ ಕಾರ್ಯಕ್ರಮ ಡಿ.15 ರಂದು ನಡೆಯಿತು. ನಿವೃತ್ತ ಜನರಲ್ ಮೇಜರ್ ಎಮ್.ವಿ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ ವಸಂತ ಬಂಗೇರ, ಗುರುನಾರಾಯಣ ಸೇವಾಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಬೆಳ್ತಂಗಡಿ ಪಟ್ಟಣ ಪಂ ಮಾಜಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಬಿಲ್ಲವ ಮಹಾಮಂಡಲ ಉಪಾಧ್ಯಕ್ಷ, ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ, ಡಾ| ಜಗನ್ನಾಥ್, ಗುರುದೇವ ಕಾಲೇಜು ನಿವೃತ್ತ ಪ್ರಾಂಶುಪಾಲ ಕೃಷ್ಣಪ್ಪ, ಚಲನಚಿತ್ರ ನಟ ಮತ್ತು ನಿರ್ದೇಶಕ ಸುರ್ಯೋದಯ ಪೆರಂಪಳ್ಳಿ, ಖ್ಯಾತ ಗಾಯಕಿ ಕಲಾವತಿ ದಯಾನಂದ, ಜಯರಾಮ್ ಬಂಗೇರ ಹೇರಾಜೆ ಮತ್ತಿತರರು ಉಪಸ್ಥಿತರಿದ್ದರು.
ಆಹ್ವಾನಿತ ಗಣ್ಯರನ್ನು ಮಾಲಕರಾದ ಜಯಶ್ರೀ ಮತ್ತು ಉಮೇಶ್ ಕುಮಾರ್ ಹಾಗೂ ಮಕ್ಕಳಾದ ಸುರಭಿ, ಶ್ರಾವ್ಯ ಸತ್ಕರಿಸಿದರು.