HomePage_Banner_
HomePage_Banner_

ಮಂಜೊಟ್ಟಿ ಪಿಕಪ್-ಬೈಕ್ ಡಿಕ್ಕಿ: ಇಬ್ಬರ ಸಾವು

ಬೆಳ್ತಂಗಡಿ: ಇಲ್ಲಿನ ನಡ ಗ್ರಾಮದ ಮಂಜೊಟ್ಟಿನಲ್ಲಿ ಡಿ.15 ರಂದು ಬೈಕ್‌ಗೆ ಪಿಕ್ ಅಪ್ ಡಿಕ್ಕಿಯಾಗಿ ಸಂಭವಿಸಿದ ಅವಘಾತದಲ್ಲಿ ಬೈಕ್ ಸವಾರಿಬ್ಬರು ಮೃತ ಪಟ್ಟಿದ್ದಾರೆ. ನಾವೂರು ಭೀಮಂಡೆ ನಿವಾಸಿ ಸೇಸಪ್ಪ ಮೂಲ್ಯ(44ವ) ಮತ್ತು ಅವರ ಸಂಬಂಧಿ ನಾವೂರು ಜನತಾ ಮನೆ ನಿವಾಸಿ ಕಲ್ಯಾಣಿ(55ವ) ಮೃತಪಟ್ಟವರು.


ದ್ವಿಚಕ್ರ ವಾಹನದಲ್ಲಿ ಬೆಳ್ತಂಗಡಿಯಿಂದ ನಾವೂರು ಕಡೆಗೆ ಹೋಗುತ್ತಿದ್ದ ವೇಳೆ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಪಿಕಪ್ ಡಿಕ್ಕಿ ಹೊಡೆದು, ಅವಘಾತ ರಭಸಕ್ಕೆ ಸವಾರ ಸೇಸಪ್ಪ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರು. ಕಲ್ಯಾಣಿ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.