HomePage_Banner_
HomePage_Banner_

ಅಳದಂಗಡಿ ಮಹಾಗಣಪತಿ ಕ್ಷೇತ್ರದಲ್ಲಿ ಪಾದುಕಾನ್ಯಾಸ ಸಹಿತ ಷಡಾಧಾರ ಪ್ರತಿಷ್ಠೆ


ಬೆಳ್ತಂಗಡಿ ತಾಲೂಕಿನ ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನ ಇದರ ಪುನರ್ ನಿರ್ಮಾಣ ಕಾರ್ಯ ಆರಂಭವಾಗಿದ್ದು ಶ್ರೀ ಕ್ಷೇತ್ರದಲ್ಲಿ ಪಾದುಕಾನ್ಯಾಸ ಸಹಿತ ಷಡಾಧಾರ (ನಿಧಿಕುಂಭ) ಪ್ರತಿಷ್ಠೆ ಕಾರ್ಯಕ್ರಮ ಡಿ, 15 ರಂದು (ಇಂದು) ನಡೆಯಿತು.

ಬೆಳಿಗ್ಗೆ 7.36 ರಿಂದ 8.50 ರ ಒಳಗೆ ಷಡಾಧಾರ- ಪಾದುಕನ್ಯಾಸ ಆಧಿವಾಸಾದಿಗಳ ಹೋಮ, ಪ್ರತಿಷ್ಠೆ-ನ್ಯಾಸಗಳು-ಪೂಜೆ ನಡೆಯಿತು.
ಸಮಾರಂಭದಲ್ಲಿ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರೀಯ ಪ್ರಮುಖ್ ಡಾ. ಕಲ್ಲಡ್ಕ ಪ್ರಭಾಕರ ಭಟ್ಟ, ಅಳದಂಗಡಿ ಅಜಿಲ ಸೀಮೆಯ ತಿಮ್ಮಣ್ಣರಸ ಡಾ. ಪದ್ಮಪ್ರಸಾದ ಅಜಿಲ, ಶಾಸಕ ಹರೀಶ್ ಪೂಂಜ ಮುಖ್ಯ ಅತಿಥಿಯಾಗಿದ್ದರು.

ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ ಗಂಗಾಧರ ಮಿತ್ತಮಾರು, ಪ್ರಧಾನ ಅರ್ಚಕ ಎ ಸೋಮನಾಥ ಮಯ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಶಶಿಧರ ಡೋಂಗ್ರೆ, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ನೊಚ್ಚ, ಕೋಶಾಧಿಕಾರಿ ಅನಿಲ್ ಕುಮಾರ್ ಮಾಳಿಗೆಮನೆ, ಸಂಘಟನಾ ಕಾರ್ಯದರ್ಶಿ ಕೆ ನಾರಾಯಣ ರಾವ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.