ಎಸ್‌ಡಿಎಂ ಕಲಾಭವನದಲ್ಲಿ ಜೈನ್ ಮಿಲನ್ ವತಿಯಿಂದ ಜಿನ ಭಜನೆ ಸ್ಪರ್ಧೆ


ಜೈನ್ ಮಿಲನ್ ಬೆಳ್ಳಿಹಬ್ಬಕ್ಕೆ ಚಾಲನೆ
ಭಾರತೀಯ ಜೈನ್ ಮಿಲನ್ ವಲಯ 8 ಮಂಗಳೂರು ವಿಭಾಗ ಇದರ ವತಿಯಿಂದ ಜಿನ ಭಜನೆ ಸ್ಪರ್ಧೆ ಮತ್ತು ಜೈನ್ ಮಿಲನ್ ಪ್ರಾಯೋಜಕತ್ವದಲ್ಲಿ ಬೆಳ್ತಂಗಡಿ ಜೈನ್ ಮಿಲನ್ ರಜತ ಸಂಭ್ರಮದ ಉದ್ಘಾಟನೆ ಡಿ. 15 ರಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ಬೆಳ್ತಂಗಡಿಯಲ್ಲಿ ನಡೆಯಿತು.
ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಜೈನ್ ಮಿಲನ್ ವಲಯ 8 ರ ಅಧ್ಯಕ್ಷ ಪುಷ್ಪರಾಜ್ ಜೈನ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಜೈನ್ ಮಿಲನ್ ಸ್ಥಾಪಕಾಧ್ಯಕ್ಷ ಪಡಂಗಡಿ ಭೋಜರಾಜ ಹೆಗ್ಡೆ, ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ್, ಉಪಾಧ್ಯಕ್ಷ ಸುದರ್ಶನ್ ಜೈನ್ ಮುಖ್ಯ ಅತಿಥಿಗಳಾಗಿದ್ದರು.

ವೇದಿಕೆಯಲ್ಲಿ ಪ್ರೋ. ಸತೀಶ್ಚಂದ್ರ ಎಸ್, ಮುನಿರಾಜ ಅಜ್ರಿ, ನವೀನ್ ಜೈನ್, ಕಿಶೋರ್ ಹೆಗ್ಡೆ, ಜೀವಂಧರ ಕುಮಾರ್, ಎನ್.ಡಿ ಚೌಟ, ಬಿ ಸೋಮಶೇಖರ ಶೆಟ್ಟಿ, ದೇವರಾಜ್, ರಾಜವರ್ಮ ಆರಿಗಾ, ಧರ್ಮಪಾಲ, ರಾಜೇಶ್, ಪ್ರವೀಣ್ ಕುಮಾರ್ ಇಂದ್ರ ಮೊದಲಾದವರು ಆಸೀನರಾಗಿದ್ದರು.

ಡಾ. ಬಿ ಯಶೋವರ್ಮ ಸ್ವಾಗತಿಸಿ ಪ್ರಸ್ತಾವನೆಗೈದರು. ಡಾ.ಬಿ.ಪಿ ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧೆಯಲ್ಲಿ 107 ತಂಡಗಳು ಭಾಗಿಯಾಗಿದ್ದವು. ರಾಜ್ಯಮಟ್ಟಕ್ಕೆ ಹಿರಿಯರ ವಿಭಾಗದಲ್ಲಿ 7 ತಂಡಗಳು ಮತ್ತು ಕಿರಿಯರ ವಿಭಾಗದಲ್ಲಿ 5 ತಂಡಗಳಿಗೆ ಅವಕಾಶ ಲಭಿಸಲಿದೆ. ವಿಶೇಷವಾಗಿ ಹೇಮಾವತಿ ಹೆಗ್ಗಡೆಯವರ ಪರಿಕಲ್ಪನೆಯಂತೆ ನೃತ್ಯ ಭಜನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸುದರ್ಶನ್ ಜೈನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.