ವಿಕಲಾಂಗನ ಜೊತೆ ಸಪ್ತಪದಿ ತುಳಿದು ಬದುಕಿನ ಸಂಜೀವಿನಿಯಾದ ಯುವತಿ ಸಂಜೀವಿನಿ!

ಕಾಯರ್ತಡ್ಕ ಉಮಾಮಹೇಶ್ವರ ದೇವಸ್ಥಾನ ವಠಾರದಲ್ಲಿ ಹಿಂದೂ ಸಮಾಜೋತ್ಸವ

ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಕಾಯರ್ತಡ್ಕ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಡಿ. 15(ಇಂದು) ನಡೆದ ಹಿಂದೂ ಸಮಾಜೋತ್ಸವ ಮತ್ತು ಮಾದರಿ ವಿವಾಹ ಸಮಾರಂಭ ಎಲ್ಲರ ಮನದಲ್ಲೂ ಅಚ್ಚಳಿಯದೇ ಉಳಿಯುವ ವಿಶೇಷ ಸಂದರ್ಭವೊಂದಕ್ಕೆ ಸಾಕ್ಷಿಯಾಯಿತು. ಅಪಘಾತದಿಂದ ಕಾಲು ಕಳೆದುಕೊಂಡು ಬದುಕಿನ ಕತ್ತಲೆಯ ದಿನಗಳನ್ನು ದೂಡುತ್ತಿದ್ದ ಆ ಯುವಕನ ಪಾಲಿಗೆ ಸಂಜೀವಿನಿಯಂತೆ ಬಂದ ಆ ಯುವತಿ ಸಂಜೀವಿನಿ! ಇಂದು ನೆರೆದಿರುವ ಸಾವಿರಾರು ಜನರ ಮಧ್ಯೆ ಹಿಂದು ಧರ್ಮ ಸಂಪ್ರದಾಯ ಪ್ರಕಾರ ಆತನ ಜೊತೆ ಸಪ್ತಪದಿ ತುಳಿದು ನವಬದುಕಿನ ಮೊಲದ ಪುಟ ತೆರೆದರು.

ಹಿಂದೂ ಸಮಾಜೋತ್ಸವದಲ್ಲಿ ಮಾದರಿ ವಿವಾಹ:
ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಗ್ರಾಮ ಸಮಿತಿ ಕಳೆಂಜ -ಕಾಯರ್ತಡ್ಕ ಇದರ ಆಶ್ರಯದಲ್ಲಿ ಈ ಕಾರ್ಯಕ್ರಮ ಕಾಯರ್ತಡ್ಕದ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಅದ್ದೂರಿಯಾಗಿ ಜರುಗಿತು. ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮತಾಂತರ ಇತ್ಯಾದಿ ವಿಚಾರಗಳ ಬಗ್ಗೆ ಜನಜಾಗೃತಿಗೋಸ್ಕರ ಈ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.|


ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ, ನ್ಯಾಯವಾದಿ, ವಿಹಿಂಪ ತಾ| ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಭಜರಂಗದಳ ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಡಾ. ಎಂ .ಎಂ ದಯಾಕರ್ ಉಜಿರೆ, ಆಚರಣಾ ಸಮಿತಿ ಗೌರವಾಧ್ಯಕ್ಷ ಉಜಿರೆ ರಮೇಶ ಪ್ರಭು, ಕಾರ್ಯಕ್ರಮ ಸಮಿತಿ ಸಂಚಾಲಕ ರಾಜೇಶ್ ಎಂ.ಕೆ ನಿಡ್ಡಾಜೆ, ಗ್ರಾಮ ಸಮಿತಿ ಅಧ್ಯಕ್ಷ ಅಶೋಕ ಗೌಡ ಅಶ್ವತ್ಥಡಿ, ಬಜರಂಗದಳ ತಾ.ಸಂಯೊಜಕ ಗಣೇಶ್ ಕೆ ಮೊದಲಾದವರು ಉಪಸ್ಥಿತರಿದ್ದರು.
ಕಾಲು ಕಳೆದುಕೊಂಡಿರುವ ಯುವಕ ಚಂದ್ರಶೇಖರ ಅವರನ್ನು ಸಂಜೀವಿನಿ ಅವರು ವಿವಾಹವಾಗುವ ಮೂಲಕ ನಾಡಿಗೆ ಆದರ್ಶದ ಬೆಳಕು ತೋರಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.