“ಸೀಮಂತ”ದಲ್ಲಿ ಸೌಹಾರ್ದ ಶ್ರೀಮಂತಿಕೆ!

ವಾರದ ವಿಶೇಷ ಸುದ್ದಿ:
ಅಚ್ಚು ಮುಂಡಾಜೆ.

ಮನೆಮಂದಿಯೊಂದಿಗೆ ಸಂಭ್ರಮ

ಗರ್ಭಿಣಿಯೊಂದಿಗೆ ಸಹಭೋಜನದಲ್ಲಿ ಐ.ಎಲ್ ಪಿಂಟೋ
ಕೆಳದ ವಾರವಷ್ಟೇ ಮಿತ್ತಬಾಗಿಲು ಗ್ರಾಮದ ಕಾಜೂರು ನಿವಾಸಿ ತುಂಗಪ್ಪ ಪೂಜಾರಿಯವರು ತನ್ನ ಪುತ್ರನ ವಿವಾಹವನ್ನು ದುರ್ಗಾದೇವಿಯ ಸನ್ನಿಧಿಯಲ್ಲಿ ನೆರವೇರಿಸಿ ಔತಣಕೋಟವನ್ನು ಕಾಜೂರು ದರ್ಗಾ ವಠಾರದಲ್ಲಿ ಹಮ್ಮಿಕೊಂಡು ಸೌಹಾರ್ದತೆಗೆ ಮಾದರಿಯಾದರೆ, ಈ ವಾರ ಬೆಳ್ತಂಗಡಿಯ ಸುದೆಮುಗೇರು ಅರ್ಹ ಕುಟುಂಬವೊಂದರ ಗರ್ಭಿಣಿಯ ಸಂತೋಷಕ್ಕಾಗಿ ಮನೆಯವರ ಒಪ್ಪಿಗೆ ಪಡೆದು ಆಕೆಗೆ ಬೇಕಾದ ಸೀರೆ-ವಸ್ತ್ರಗಳನ್ನು ಖರೀದಿಸಿಕೊಟ್ಟ ಕ್ರೈಸ್ತ ಸಮುದಾಯದ ವ್ಯಕ್ತಿಯೊಬ್ಬರು ಅವರ ಮನೆಯವರ ಜೊತೆ ತುಳುನಾಡ ಶೈಲಿಯಲ್ಲಿ ಗರ್ಭಿಣಿಗೆ ವಿಶೇಷ ಭೋಜನದ ವ್ಯವಸ್ಥೆ ರೂಪಿಸಿ ತಾನೂ ಸಹಭೋಜನದಲ್ಲಿ ಭಾಗಿಯಾಗಿ ಮತ್ತೊಮ್ಮೆ ಜನತೆಯ ಮುಂದೆ ಸೀಮಂತನದಲ್ಲೂ ಸೌಹಾರ್ದತೆಯ ಶ್ರೀಮಂತಿಕೆ ಮೆರೆದಿದ್ದಾರೆ.

ಬಂಟ್ವಾಳ ತಾಲೂಕು ಕಡೆಶಿವಾಲಯ ನಿವಾಸಿ ಚೋಮ ಮತ್ತು ದಿ. ಗಿರಿಜಾ ದಂಪತಿ ಪುತ್ರಿ, ಉಮೇಶ್ ಅವರ ಪತ್ನಿ, ಸುದೆಮುಗೇರು ನಿವಾಸಿ, ಚಿಕ್ಕಪ್ಪ ಬಾಬು ಮತ್ತು ಬಾಗಿ ಅವರ ಮನೆಯಲ್ಲಿ ನೆಲೆಸಿದ್ದ ತುಂಬು ಗರ್ಭಿಣಿ ಅಶ್ವಿನಿ ಅವರಿಗೆ ಡಿ. ೯ ರಂದು ಸಂಭ್ರಮದ ದಿನ.
ಕೊಯ್ಯೂರು ಗ್ರಾಮದ ಕೃಷಿಕ, ಸೌಹಾರ್ದ ಪ್ರೇಮಿ ಹಾಗೂ ಸಾಮಾಜಿಕ ಮುಂದಾಳು ಐ.ಎಲ್ ಪಿಂಟೋ ಅವರೇ ಈ ರೀತಿ ವಿಶೇಷ ಸಂದರ್ಭಕ್ಕೆ ವ್ಯವಸ್ಥೆ ಮಾಡಿಕೊಟ್ಟವರು.
ಗರ್ಭಿಣಿ ಯುವತಿಗೆ ವಸ್ತ್ರ, ಜಡೆಗೆ ಮುಡಿಯಲು ಹೂವು ಕೊಟ್ಟು ಮನೆಯವರು ಸೇರಿ ಅಕೆಯನ್ನು ಸಿಂಗರಿಸಿದ ಬಳಿಕ ಸೀಮಂತಕ್ಕೆ ತುಳುನಾಡಿನಲ್ಲಿ ನಡೆಸುವ ಕಟ್ಟುಕಟ್ಟಳೆಯಂತೆ ಸಿಹಿತಿಂಡಿ ಮತ್ತು ವಿಶೇಷ ಊಟ ಬಡಿಸಿ ತಾವೂ ಸಹಭೋಜನದಲ್ಲಿ ಉಂಡು ಮನೆಯವರನ್ನು ಸಂತೋಷಗೊಳಿಸಿದರು. ಸುದೆಮುಗೇರು ಮನೆಯಲ್ಲಿ ಸದ್ದುಗದ್ದಲವಿಲ್ಲದೆ ನಡೆದ ಸರಳ ಸಮಾರಂಭದಲ್ಲಿ ಅವರ ಕುಟುಂಬಸ್ತರಾದ ರಾಜು, ನವ್ಯಾ, ನವೀನ್, ಚಿನ್ನಮ್ಮ, ಅಪ್ಪಿ ಇವರುಗಳು ಈ ಸುಂದರ ಕ್ಷಣಗಳಿಗೆ ಸಾಕ್ಷಿಯಾದರು.
ಜಾತಿ, ಧರ್ಮ, ಮೇಲು -ಕೀಳು, ಸ್ಪರ್ಷ- ಅಸ್ಪೃಷ್ಯ ಎಂದು ಬಡಿದಾಡಿಕೊಳ್ಳುತ್ತಿರುವ ಒಂದು ವರ್ಗದ ಜನರ ಮಧ್ಯೆ ಇಂತಹಾ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿರುವಾಗ ಜಿಲ್ಲೆಯ ಸೌಹಾರ್ದತೆಗೆ ಇನ್ನಷ್ಟು ಶಕ್ತಿಯಾಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.