HomePage_Banner_
HomePage_Banner_

ಕಲ್ಪವೃಕ್ಷ ನೆಟ್ಟು ನವದಂಪತಿ ಸಂಭ್ರಮ::: ಗಾಯತ್ರಿ- ರಾಕೇಶ್ ಭಾರದ್ವಾಜ ಮದುವೆಯಲ್ಲಿ ವಿಶೇಷತೆ

ಚಿತ್ರ 1: ಗಾಯತ್ರಿ- ಭಾರದ್ವಾಜ: ನವದಂಪತಿ

ಚಿತ್ರ 2: ಮದುವೆ: ನವ ದಂಪತಿ ದೇವಳದ ಆವರಣದಲ್ಲಿ ಕಲ್ಪವೃಕ್ಷ ನೆಟ್ಟು ಮಾದರಿಯಾದರು.


ಅಳದಂಗಡಿ: ನಾಲ್ಕೂರು ಗ್ರಾಮದ ಸೂಳಬೆಟ್ಟು ನಿವಾಸಿ ಸುಜಾತಾ ಮತ್ತು ಪತ್ರಕರ್ತ ದೀಪಕ್ ಆಠವಳೆಯವರ ಪುತ್ರಿ ಗಾಯತ್ರಿ ಅವರ ವಿವಾಹವು ಮೈಸೂರು ಶ್ರೀರಾಂಪುರದ ದಿ| ತಾರಾ ಮತ್ತು ರಾಜೇಶ್ ದಂಪತಿಯ ಪುತ್ರ ರಾಕೇಶ ಭಾರದ್ವಾಜ ಅವರ ಜೊತೆ ಡಿ. ೮ ರಂದು ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕೃಷ್ಣಕುಂಜ ಮಂಟಪದಲ್ಲಿ ನಡೆಯಿತು.

ಬಳಿಕ ನವ ದಂಪತಿ ತಮ್ಮ ವಿವಾಹದ ನೆನಪಿಗಾಗಿ ದೇವಸ್ಥಾನದ ಆವರಣದಲ್ಲಿ ಕಲ್ಪವೃಕ್ಷ ನೆಟ್ಟು ನೀರೆರೆಯುವ ಮೂಲಕ ಇತರರಿಗೆ ಮಾದರಿಯಾದರು.
ಗಾಯತ್ರಿ ಅವರು ವಿಟ್ಲದ ಮೈತ್ಯೇಯಿ ಗುರುಕುಲದಲ್ಲಿ ಸಂಪೂರ್ಣ ಸಂಸ್ಕೃತ ಭಾಷಾ ಮಾಧ್ಯಮದಲ್ಲಿ ವೇದ, ವಿಜ್ಞಾನ, ಕೃಷಿ, ಯೋಗ, ಕಲಾಕೌಶಲ್ಯ ಪಂಚಮುಖಿ ಶಿಕ್ಷಣ ಪಡೆದವರಾಗಿದ್ದಾರೆ. ಅಂತೆಯೇ ರಾಕೇಶ ಭಾರದ್ವಾಜ ಅವರು ಕೊಪ್ಪದ ಹರಿಹರಪುರ ಪ್ರಬೋಧಿನಿ ಗುರುಕುಲದಲ್ಲಿ ಇದೇ ಶಿಕ್ಷಣ ಪಡೆದುಕೊಂಡವರಾಗಿದ್ದಾರೆ.
ಇಬ್ಬರೂ ಕೂಡ ತಾವು ಕಲಿತ ಪಾಠಶಾಲೆಯಲ್ಲಿ ಬೋಧಕರಾಗಿದ್ದರು. ಇದೀಗ ರಾಕೇಶ್ ಅವರೊಂದಿಗೆ ಸಪ್ತಪದಿ ತುಳಿದಿರುವ ಗಾಯತ್ರಿ ಅವರು ಮುಂದಕ್ಕೆ ಹರಿಹರಪುರದ ಗುರುಕುಲದಲ್ಲಿ ಸತಿ ಪತಿಗಳಾಗಿ ಬೋಧನಾ ವೃತ್ತಿ ಸೇವೆಯಲ್ಲಿ ಮುಂದುವರಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.