ನಾಳ : ಇಲ್ಲಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಿ.13 ರಂದು ರಾತ್ರಿ ವಿಶೇಷ ರಂಗ ಪೂಜೆ ನಡೆಯಿತು. ನಾಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ಮತ್ತು ಕೆರೆಕೋಡಿ ತಿಮ್ಮಪ್ಪ ಗೌಡ ಹಾಗೂ ಮನೆಯವರ ಸೇವಾರ್ಥವಾಗಿ ವಿಶೇಷ ರಂಗ ಪೂಜೆ ಹಾಗೂ ಅನ್ನಸಂತರ್ಪಣೆ ಜರಗಿತು. ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣ ರವರ ನೇತೃತ್ವದಲ್ಲಿ ವಿಧಿವತ್ತಾಗಿ ನಡೆಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷರು,ಅಭಿವೃದ್ಧಿ ಸಮಿತಿ ಅಧ್ಯಕ್ಷರು,ಪದಾಧಿಕಾರಿಗಳು, ಭಜನಾ ಮಂಡಳಿ ಅಧ್ಯಕ್ಷರು ಸದಸ್ಯರು ಮತ್ತು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಡಿ.14 ರಂದು ನಾಳ ನಿವೃತ್ತ ಮುಖ್ಯ ಶಿಕ್ಷಕರಾದ ಲಲಿತ ಮತ್ತು ಪ್ರಭಾಕರ ರಾವ್ ದಂಪತಿಗಳಿಂದ ರಂಗ ಪೂಜೆ. ಡಿ.15 ರಂದು ಇಳಂತಿಲ ಅನ್ನಾಜೆ ಕುಶಾಲಪ್ಪ ಗೌಡ ಮತ್ತು ಮನೆಯವರಿಂದ ರಂಗ ಪೂಜೆ. ಡಿ.16 ರಂದು ಪೂರ್ವಾಹ್ನ 5.30 ಕ್ಕೆ ಧನು ಸಂಕ್ರಮಣ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ,ಫಲಹಾರ, ರಾತ್ರಿ ಮಚ್ಚಿನ ಅಳಕಲ ಐತ್ತಪ್ಪ ಗೌಡ ಮತ್ತು ಮನೆಯವರಿಂದ ಮಧ್ಯಾಹ್ನ ಅನ್ನದಾನ, ರಾತ್ರಿ ರಂಗ ಪೂಜೆ ಜರಗಲಿದೆ.
ಈ ಎಲ್ಲಾ ವಿಶೇಷ ಪೂಜೆಯಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗ ಬೇಕು ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ಮಜಲು ತಿಳಿಸಿದರು.