ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯ, ವಾಣಿ ಸೌಹಾರ್ದ ಕೋ ಅಪರೇಟಿವ್ (ಲಿ.) ಬೆಳ್ತಂಗಡಿ, ವಿಶ್ವಕರ್ಮ ಸಹಕಾರಿ ಬ್ಯಾಂಕ್ ಉಜಿರೆ, ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ ಬೆಳ್ತಂಗಡಿ ಹಾಗೂ ಸಂತೃಪ್ತಿ ಗೆಳೆಯರ ಬಳಗ ಉಜಿರೆ ಇದರ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಗೆ ಬ್ಯಾಂಕ್ ವ್ಯವಹಾರ ಮತ್ತು ಉಳಿತಾಯ ಖಾತೆ ಹಾಗೂ ಸ್ವಚ್ಚತಾ ಆಂದೋಲನದ ಬಗ್ಗೆ ಮಾಹಿತಿ ಶಿಭಿರವನ್ನು ಶ್ರೀ sdm ಹಿರಿಯ ಪ್ರಾಥಮಿಕ ಶಾಲೆ ಉಜಿರೆಯಲ್ಲಿ ಡಿ.14ರಂದು ಶಾಲಾ ಮುಖ್ಯೋಪಾಧ್ಯಯಿನಿ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪ್ರಗತಿ ಪರ ಕೃಷಿಕ ಕೃಷ್ಣಪ್ಪ ಗೌಡ ಸವಣಾಲು ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಸಿಂಡಿಕೇಟ್ ಬ್ಯಾಂಕ್ ನ ಸಮಾಲೋಚನಾಧಿಕಾರಿ ಲತೇಶ್ ಬ್ಯಾಂಕ್ ವ್ಯವಹಾರ ಮತ್ತು ಉಳಿತಾಯ ಖಾತೆ ಬಗ್ಗೆ ಶಾಲಾ ಮಕ್ಕಳಿಗೆ ಮಾಹಿತಿ ನೀಡಿದರು. ಸಂತೃಪ್ತಿ ಗೆಳೆಯರ ಬಳಗ ಉಜಿರೆ ಹಾಗೂ ವಾಣಿ ಸೌಹಾರ್ಧ ಕೋ-ಆಪರೇಟಿವ್ (ಲಿ.) ಬೆಳ್ತಂಗಡಿ ಇದರ ನಿರ್ದೇಶಕ ಗೋಪಾಲಕೃಷ್ಣ ಜಿ.ಕೆ ಉಜಿರೆ ಸ್ವಚ್ಚತಾ ಆಂದೋಲನದ ಬಗ್ಗೆ ಮಾಹಿತಿ ನೀಡಿದರು.
ಈ ಸಂಧರ್ಭ ವಿಶ್ವಕರ್ಮ ಸಹಕಾರಿ ಬ್ಯಾಂಕ್ ಉಜಿರೆ ಶಾಖಾ ವ್ಯವಸ್ಥಾಪಕಿ ಕುI ಶ್ರುತಿ, ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯ ಅಧ್ಯಕ್ಷ ಸುರೇಶ್ ಕೌಡಂಗೆ, ಕಾರ್ಯದರ್ಶಿ ಗಂಗಾಧರ ಉಜಿರೆ, ಸಂಘಟನಾ ಕಾರ್ಯದರ್ಶಿ ಸುಜೀತ್ ಕೊಯ್ಯೂರು, ಶಾಲಾ ಮಕ್ಕಳು, ಶಿಕ್ಷಕವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಕೂಸಪ್ಪಗೌಡ ಸ್ವಾಗತಿಸಿ, ದೈಹಿಕ ಶಿಕ್ಷಕ ಶೀನಪ್ಪಗೌಡ ವಂದಿಸಿದರು. ಸಹಶಿಕ್ಷಕ ಪವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.