ಶಿಬಾಜೆ: ಪೆರ್ಲ ಶಾಲಾ ಬಾವಿಗೆ ವಿಷ ಹಾಕಿದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪೋಷಕರ ಪ್ರತಿಭಟನೆ

Advt_NewsUnder_1
Advt_NewsUnder_1

ಶಿಬಾಜೆ: ಶಿಬಾಜೆ ಗ್ರಾಮದ ಪೆರ್ಲ ಸ.ಹಿ.ಪ್ರಾ.ಶಾಲಾ ಬಾವಿಗೆ ವಿಷ ಹಾಕಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಶಾಲಾ ಮಕ್ಕಳ ಪೋಷಕರು ಹಾಗೂ ವಿದ್ಯಾರ್ಥಿಗಳು ಡಿ. 13 ರಂದು ಶಾಲಾ ಗೇಟಿನ ಎದುರು ರಸ್ತೆ ತಡೆ ಪ್ರತಿಭಟನೆ ನಡೆಸಿದರು.


ಪ್ರತಿಭಟನೆಯನ್ನು ಉದ್ದೇಶಿಸಿ ಗ್ರಾ.ಪಂ ಮಾಜಿ ಅಧ್ಯಕ್ಷ ಎ.ಸಿ ಮ್ಯಾಥ್ಯೂ, ತಾ.ಪಂ ಅಧ್ಯಕ್ಷೆ ದಿವ್ಯಾಜ್ಯೋತಿ, ಡಿ.ಎಫ್.ಎಸ್ ಜಿಲ್ಲಾ ಮುಖಂಡ ಗುರುವಪ್ಪ, ಪೋಷಕರಾದ ಶ್ರೀಧರ್‌ರಾವ್, ಶೋಭಾ, ಅಭ್ಯಂಕರ್ ಮಾತನಾಡಿ ಬಾವಿಗೆ ವಿಷ ಹಾಕಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.


ಈ ಸಂದರ್ಭ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಯರಾಮ್, ಕ್ಷೇತ್ರ ಶಿಕ್ಷಣ ಇಲಾಖೆಯ ಸುಭಾಶ ಜಾದವ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ತಾರಾಕೇಸರಿ, ಶಂಭುಶಂಕರ್, ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು.


ತಹಶೀಲ್ದಾರರು ಮತ್ತು ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಬಂದು ತಮ್ಮ ಮನವಿಯನ್ನು ಸ್ವೀಕರಿಸಬೇಕೆಂದು ಪ್ರತಿಭಟನಾಕಾರರ ಬೇಡಿಕೆಯಂತೆ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಹಾಗೂ ಕಂದಾಯ ನಿರೀಕ್ಷಕ ಪ್ರತೀಕ್ ಬಂದು ಮನವಿ ಸ್ವೀಕರಿಸಿದರು.
ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವುದಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂತೆಗೆದು ಕೊಳ್ಳಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.