ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಮಾದರಿ ಶಾಲಾ ಮಕ್ಕಳಿಗೆ ನೀರಿನ ಬಾಟಲಿ ವಿತರಣೆ

ಬೆಳ್ತಂಗಡಿ: ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬೆಳ್ತಂಗಡಿ ಮಾದರಿ ಶಾಲಾ ಮಕ್ಕಳಿಗೆ ನೀರಿನ ಬಾಟಲಿ ವಿತರಣಾ ಸಮಾರಂಭವು ಡಿ.12 ರಂದು ಜೆಸಿ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ ನೀರಿನ ಬಾಟಲಿ ವಿತರಿಸಿ ಮಾತನಾಡಿ ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಪ್ಲಾಸ್ಟಿಕ್ ಮುಕ್ತ ಭಾರತ, ಸ್ವಚ್ಚ ಭಾರತದ ಸಂಕಲ್ಪಕ್ಕೆ ಶಾಲಾ ಮಕ್ಕಳಿಗೆ ನೀರು ಕುಡಿಯಲು ಸ್ಟೀಲ್ ಬಾಟಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಯ ಸುರೇಶ್, ಘಟಕದ ಪೂರ್ವಾಧ್ಯಕ್ಷರಾದ ಅಶೋಕ್ ಕುಮಾರ್ ಬಿ.ಪಿ, ಸಂತೋಷ್ ಪಿ ಕೋಟ್ಯಾನ್ ಬಳಂಜ, ಕಿರಣ್ ಕುಮಾರ್ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ಪ್ರಶಾಂತ್ ಲಾಲ, ಕಾರ್ಯದರ್ಶಿ ಸ್ವರೂಪ್ ಶೇಖರ್, ಕೋಶಾಧಿಕಾರಿ ಶೀತಲ್ ಜೈನ್, ಜೆಸಿರೆಟ್ ಪೂರ್ವಾಧ್ಯಕ್ಷೆ ಆಶಾ ಪ್ರಶಾಂತ್, ಸದಸ್ಯರಾದ ಪ್ರೀತಂ ಶೆಟ್ಟಿ, ಶಂಕರ್ ರಾವ್, ಸುಧೀರ್ ಜೈನ್, ಸುದೀರ್ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.