ಮುಂಡಾಜೆ ಪ್ರಾ.ಕೃ.ಪ.ಸ.ಸಂಘ ಶತಮಾನೋತ್ಸವ ಸಂಕೀರ್ಣ ಕಾಮಗಾರಿಗಳ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಸಂಕೀರ್ಣ ಕಾಮಗಾರಿಗಳ ಶುಭಾರಂಭ ಕಾರ್ಯಕ್ರಮವು ಡಿ.12 ರಂದು ನಡೆಯಿತು.
ನೂತನ ಸಂಕೀರ್ಣವು ಸೋಮಂತಡ್ಕ ಪೇಟೆಯ ಮಧ್ಯ ಭಾಗದಲ್ಲಿ ನಿರ್ಮಾಣಗೊಳ್ಳಲಿದೆ. ಪ್ರಧಾನ ಕಛೇರಿ, ನೆಲ ಅಂತಸ್ತಿನಲ್ಲಿ ವಾಣಿಜ್ಯ ಮಳಿಗೆಗಳು, ಸಭಾಭವನ, ವಸತಿ ಗೃಹ ನಿರ್ಮಾಣಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಎನ್.ಎಸ್ ಗೋಖಲೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಪಡ್ಕೆ, ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಅಧ್ಯಕ್ಷ ಅಡೂರು ವೆಂಕಟ್ರಾವ್, ಮೇಜರ್ ಎಂ.ವಿ.ಭಟ್, ನಿರ್ದೇಶಕರಾದ ಮೋಹನ ಚಂದ್ರಗೋಖಲೆ, ಪ್ರಕಾಶ್ ನಾರಾಯಣ, ಜ್ಯೋತಿ ಜೆ ಪಡ್ಕೆ, ಮಾಜಿ ಅಧ್ಯಕ್ಷ ಶಶಿಧರ ಖಾಡಿಲ್ಕಾರ್ ಹಾಗೂ ಅನಂತ ಭಟ್ ಮಚ್ಚಿಮಲೆ, ಮುಂಡ್ರುಪಾಡಿ ವಿಶ್ವನಾಥ ಶೆಟ್ಟಿ, ಡಿ.ಸಿ.ಸಿ ಬ್ಯಾಂಕ್ ಮೇಲ್ವಿಚಾರಕ ಸಂದೇಶ್, ಗ್ರಾ.ಪಂ ಸದಸ್ಯೆ ಅಶ್ವಿನಿ ಹೆಬ್ಬಾರ್, ಇಂಜಿನಿಯರ್‌ಗಳಾದ ಪ್ರಮೋದ್, ಶೈಲೇಶ್, ರಾಜೇಂದ್ರ, ಶಾಖಾ ವ್ಯವಸ್ಥಾಪಕರಾದ ಮಧುಕರರಾವ್ ಕಜೆ, ವೆಂಕಟೇಶ್ವರ ಭಟ್, ಸುರೇಶ್ ಭಟ್ ಉಪಸ್ಥಿತರಿದ್ದರು.
ಭಾರತಿ ಯನ್ ಪಡ್ಕೆ, ಸಚಿನ್, ಗ್ರಾ.ಪಂ ಸದಸ್ಯ ಗಣೇಶ್, ಎಲ್ಲಾ ಶಾಖಾ ಸಿಬ್ಬಂದಿಗಳು, ಊರಿನ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.
ಕಾನರ್ಪ ಸತ್ಯನಾರಾಯಣ ಹೊಳ್ಳ, ಮುರಳಿಧರ ಅಸ್ರಣ್ಣ, ಪ್ರೇಮಾನಂದ ಪಡ್ಕೆ, ವೈದಿಕ ಕಾರ್ಯಕ್ರಮದಲ್ಲಿ ಸಹಕಾರ ನೀಡಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.