ಶ್ರೀ ಶಾರದಾ ಭಜನಾ ಮಂಡಳಿಯ ನೂತನ ಕಟ್ಟಡ ಉದ್ಘಾಟನೆ

ಬೆಳ್ತಂಗಡಿ: ಇಲ್ಲಿನ ಶ್ರೀ ಶಾರದಾ ಭಜನಾ ಮಂಡಳಿ ಪುದ್ದೊಟ್ಟು ಲಾಯಿಲ ಇದರ ಭಜನಾ ಮಂದಿರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಡಿ.11 ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಕೀಲ ಬಿ.ಕೆ ದನಂಜಯರಾವ್ ನೆರವೇರಿಸಿದರು. ಶ್ರೀ ಶಾರದಾ ಭಜನಾ ಮಂಡಳಿ ಅಧ್ಯಕ್ಷ ದಿವಾಕರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಶ್ರೀ.ಕ್ಷೇ.ಗ್ರಾ.ಯೋಜನೆಯ ಯೋಜನಾಧಿಕಾರಿ ಜಯಕರ ಶೆಟ್ಟಿ ಉಪಸ್ಥಿತರಿದ್ದರು.ವೇದಿಕೆಯಲ್ಲಿ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಗಿರಿಧರ ಪೂಜಾರಿ, ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಕೆ.ಗಿರೀಶ್ ಡೊಂಗ್ರೆ, ಉಪಸ್ಥಿತರಿದ್ದರು.
ಅನನ್ಯ ಹಾಗೂ ಚೈತ್ರ ಪ್ರಾರ್ಥನೆ ನೆರವೇರಿಸಿ, ಕೆ ಗಿರೀಶ್ ಡೋಂಗ್ರೆ ಸ್ವಾಗತಿಸಿದರು. ಆರ್.ಆರ್ ಕನ್ನಾಜೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.