ಬೆಳ್ತಂಗಡಿ ಶಾಸಕರ ಕಚೇರಿಯಿಂದ ವಿನೂತನ ಯತ್ನ: ಕಲಿಕೆ ಮುಗಿದ ಬಳಿಕ ಗಳಿಕೆಯ ಭರವಸೆಯ ಪ್ರಯತ್ನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜರ ಕಚೇರಿ ಶ್ರಮಿಕದಲ್ಲಿ ವಿನೂತನ ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗಿದ್ದು. ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಅರಸುತ್ತಿರುವ ಉದ್ಯೋಗಾರ್ಥಿಗಳನ್ನು ಹುಡುಕುತ್ತಿರುವ ಸಂಸ್ಥೆಗಳನ್ನು ಸಂಪರ್ಕಿಸುವ, ಅವರಿಗೆ ಬೇಕಾದ ಅರ್ಹ ಅಭ್ಯರ್ಥಿಗಳನ್ನು ಹುಡುಕಿ, ಸಂದರ್ಶನ ಮಾಡಿ ಅಗತ್ಯ ತರಬೇತಿ ನೀಡಿ ನೇಮಕಾತಿಗೆ ಸಹಾಯ ಮಾಡುವ ಪ್ರಯತ್ನ ನಡೆದಿದೆ. ಈ ಕುರಿತಾಗಿ ನಿನ್ನೆ ಎಲವೇಟ್ ಲೈಫ್‌ನ ಮೂಲಕ ಮೊದಲ ಅಂಗವಾಗಿ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿ ಬೆಳ್ತಂಗಡಿ ಶ್ರಮಿಕದಲ್ಲಿ ಸಂದರ್ಶನ ನಡೆದಿದೆ.

ಉದ್ಯೋಗಾಂಕ್ಷಿಗಳು ತಮ್ಮ ಅರ್ಹತೆಯ ಶೈಕ್ಷಣಿಕ ದಾಖಲೆಗಳನ್ನು ಈ ಕೆಳಗಿನ ಈ ಮೈಲ್ ಐಡಿಗೆ [email protected] ಕಳುಹಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಶಾಸಕರ ಕಚೇರಿ ಶ್ರಮಿಕದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.