ರೋವರ್ಸ್ ರೇಂಜರ್ಸ್ ವತಿಯಿಂದ ಏಡ್ಸ್ ಜಾಗೃತಿ ಕಾರ್ಯಕ್ರಮ

ಉಜಿರೆ: ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಮಹತ್ತರ ಸಂಶೋಧನೆಗಳು ನಡೆಯುತ್ತಿದ್ದರೂ ನಮಗಿನ್ನೂ ಮನುಕುಲವನ್ನು ಕಾಡುತ್ತಿರುವ ಮಹಾಮಾರಿ ಏಡ್ಸ್ ಗೆ ನಿಯಂತ್ರಣ ಹಾಕಲು ಸಾಧ್ಯವಾಗುತ್ತಿಲ್ಲ. ಆದರೆ ಸಮಾಜದಲ್ಲಿ ಇದರ ನಿಯಂತ್ರಣದ ಕುರಿತು ಸರಿಯಾದ ಜಾಗೃತಿ ಮೂಡಿಸಿದರೆ ಏಡ್ಸ್ ರೋಗವನ್ನು ಜಗತ್ತಿನಿಂದಲೇ ತೊಡೆದು ಹಾಕುವುದು ಅಸಾಧ್ಯವೇನಲ್ಲ” ಎಂದು ಉಜಿರೆ ಸ್ನಾತಕೋತ್ತರ ಕಾಲೇಜಿನ ಎಂ.ಎಸ್.ಡಬ್ಲ್ಯು. ವಿಭಾಗದ ಮುಖ್ಯಸ್ಥ ಪ್ರೊ.ರವಿಶಂಕರ್ ಅಭಿಪ್ರಾಯಪಟ್ಟರು.

ಅವರು ಉಜಿರೆಯ ಶ್ರೀ ಧ. ಮಂ.ಪ. ಕಾಲೇಜಿನಲ್ಲಿ ನಡೆದ ವಿಶ್ವ ಏಡ್ಸ್ ದಿನದ ಪ್ರಯುಕ್ತ ಕಾಲೇಜಿನ ರೋವರ್ಸ್ ರೇಂಜರ್ಸ್ ವತಿಯಿಂದ ಹಮ್ಮಿಕೊಂಡಿದ್ದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಏಡ್ಸ್ ಮನುಕುಲವನ್ನೇ ಕಾಡುತ್ತಿರುವ ಭೀಕರ ರೋಗವಾಗಿ ಇಂದಿಗೂ ಉಳಿದುಕೊಂಡಿದೆ. ಆದರೆ ರೋಗಕ್ಕಿಂತಲೂ ರೋಗದ ಕುರಿತು ಸಮಾಜದಲ್ಲಿ ಹರಡಿರುವ ತಪ್ಪು ಕಲ್ಪನೆಗಳೇ ಭಯ ಹುಟ್ಟಿಸುವಂತಿದೆ. ಏಡ್ಸ್ ರೋಗವು ರೋಗಿಯೊಟ್ಟಿಗಿನ ಲೈಂಗಿಕ ಸಂಬಂಧ ಅಥವಾ ರೋಗಾಣುವಿನಿಂದ ಕೂಡಿದ ರಕ್ತದ ವರ್ಗಾವಣೆ ಮತ್ತು ಅಸುರಕ್ಷಿತ ಚುಚ್ಚುಮದ್ದು ಬಳಸುವುದರಿಂದ ಹರಡಬಹುದೇ ವಿನಾಃ ಬೇರೆ ರೀತಿಯಲ್ಲಿ ಹರಡುವುದಿಲ್ಲ. ರೋಗಿಯನ್ನು ಮುಟ್ಟುವುದುರಿಂದ, ಅವರೊಂದಿಗೆ ಆಹಾರ ಇತ್ಯಾದಿಗಳನ್ನು ಹಂಚಿಕೊಳ್ಳುವುದುರಿಂದ ರೋಗವು ಪಸರಿಸಬಹುದು ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಇದರಿಂದ ರೋಗಿಯು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿದ್ದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಆದ್ದರಿಂದ ಏಡ್ಸ್ ಕುರಿತು ಸರಿಯಾದ ತಿಳುವಳಿಕೆಯನ್ನು ಸಮಾಜ ಹೊಂದಿರುವುದು ಅತ್ಯಗತ್ಯವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ರೋವರ್ಸ್ ಸ್ಕೌಟ್ ಲೀಡರ್ ಪ್ರಸಾದ್ ಕುಮಾರ್ ಜೈನ್ ಉಪಸ್ಥಿತರಿದ್ದರು. ರೋವರ್ ಪ್ರತೀಕ್ ಸ್ವಾಗತಿಸಿ, ರೇಂಜರ್ ಅಮೃತ ವಂದಿಸಿದರು. ರೇಂಜರ್ ರಶ್ಮಿತ ಕಾರ್ಯಕ್ರಮವನ್ನು ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.