ಎಸ್.ಡಿ.ಎಮ್ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ಇ.ಮಹಾಬಲ ಭಟ್ಟ ನಿಧನ


ಉಜಿರೆ: ಇಲ್ಲಿನ ಎಸ್.ಡಿ.ಎಮ್ ಕಾಲೇಜು ನಿವೃತ್ತ ಉಪಪ್ರಾಂಶುಪಾಲ ಕಲ್ಮಂಜ ಗ್ರಾಮದ ನಿಡಿಗಲ್ ನಿವಾಸಿ ಡಾ| ಇ.ಮಹಾಬಲ ಭಟ್ಟ(69ವ) ಅವರು ಪುತ್ತೂರಿನಲ್ಲಿ ಇಂದು(ಡಿ.12) ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಂಸ್ಕೃತ ವಿದ್ವಾಂಸರಾಗಿದ್ದ ಅವರು ಎಸ್.ಡಿ.ಎಮ್ ಸಂಸ್ಥೆಗಳಲ್ಲಿ ದೀರ್ಘ ಕಾಲ ಉಪನ್ಯಾಸಕರಾಗಿದ್ದರು. ಧಾರ್ಮಿಕ ಪ್ರವಚನಕಾರರೂ ಆಗಿದ್ದ ಅವರು ಅತ್ಯುತ್ತಮ ಕಾರ್ಯಕ್ರಮ ಉದ್ಘೋಷಕರಾಗಿಯೂ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ, ಪುತ್ರ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.
2 ಗಂಟೆಗೆ ಪಾರ್ಥಿವ ಶರೀರ ಕಲ್ಮಂಜ ಮನೆಗೆ:
ಮೃತರ ಪಾರ್ಥಿವ ಶರೀರ ಇಂದು ಮಧ್ಯಾಹ್ನ 2 ಗಂಟೆಗೆ ಕಲ್ಮಂಜ ಗ್ರಾಮದ ನಿಡಿಗಲ್ ಮನೆಗೆ ಆಗಮಿಸಲಿದೆ. ಈ ಸಂದರ್ಭ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದೆ ಎಂದು ಮೃತರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.