ರಕ್ತೇಶ್ವರಿ ಪದವು ಭಜನಾ ಮಂಡಳಿ ನಗರ ಭಜನಾ ಸಂಪನ್ನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ನ್ಯಾಯತರ್ಪು : ಇಲ್ಲಿಯ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ವತಿಯಿಂದ 1 ವಾರದ ನಗರ ಭಜನಾ ಕಾರ್ಯಕ್ರಮ ಡಿ.3 ರಂದು ಪ್ರಾರಂಭವಾಗಿ ಡಿ.10 ರಾತ್ರಿ 8 ಗಂಟೆಗೆ ನಗರ ಭಜನೆ ಭಜನಾ ಮಂಡಳಿ ವಠಾರದಲ್ಲಿ ಸಂಪನ್ನ ಗೊಂಡಿತು.ಭಜನಾ ಮಂಡಳಿ ಅಧ್ಯಕ್ಷ ಕುಶಾಲಪ್ಪ ಗೌಡ ಕಲಾಯಿತೋಟ್ಟು ಈ ಸಂದರ್ಭದಲ್ಲಿ ಮಾತನಾಡುತ್ತಾ ಕಳೆದ 7 ದಿನಗಳಲ್ಲಿ ನಡೆದ ನಗರ ಭಜನೆಯನ್ನು ಸುಮಾರು 97 ಮನೆಗಳಿಗೆ ಭೇಟಿ ನೀಡುವ ಮೂಲಕ ನಡೆಸಲಾಯಿತು. ಪ್ರತಿಯೊಂದು ಮನೆಯವರು, ಭಜನಾ ಮಂಡಳಿ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು. ಹಾಗೂ ದಾರ್ಮಿಕ, ಭಕ್ತಿ, ಶ್ರದ್ಧೆಯಿಂದ ಭಜನೆಯಲ್ಲಿ ಪಾಲ್ಗೊಂಡು ಸ್ಪಂದಿಸಿದ ಭಕ್ತಾದಿಗಳಿಗೆ ಅಭಿನಂದನೆ ಸಲ್ಲಿಸಿದರು.ಡಿ.15 ರಂದು ಸಂಜೆ ನಡೆಯುವ ವಾರ್ಷಿಕೋತ್ಸವಕ್ಕೆ ಹೆಚ್ಚಿನ ಸಹಕಾರ ನೀಡುವಂತೆ ವಿನಂತಿಸಿದರು.ಈ ಸಂದರ್ಭದಲ್ಲಿ ನಾಳ ದುರ್ಗಾಪರಮೇಶ್ವರಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ,ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿನೇಶ ಗೌಡ ಕಲಾಯಿತೋಟ್ಟು, ಭಾರತಿ ವಂಜಾರೆ,ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಗಿರಿಯಪ್ಪ ಗೌಡ ಕಲಾಯಿತೋಟ್ಟು, ನ್ಯಾಯತರ್ಪು ಗ್ರಾಮ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ‌ವಸಂತ ಗೌಡ ಕಲಾಯಿತೋಟ್ಟು, ಅರಣ್ಯ ಸಮಿತಿ ಅಧ್ಯಕ್ಷ ವಸಂತ ಕುಮಾರ್ ವಂಜಾರೆ,ನೇತಾಜಿ ಕ್ರೀಡಾ ಸಂಘದ ಅಧ್ಯಕ್ಷ ಸಿದ್ದಪ್ಪ ಗೌಡ ಹಾಕೋಟೆ, ಕೋಶಾಧಿಕಾರಿ ವಿವೇಕ್ ಬಂಗೇರ ವಂಜಾರೆ,ಭಜನಾ ಮಂಡಳಿ ಕಾರ್ಯದರ್ಶಿ ಗೋಪಾಲ ಗೌಡ ಮುದ್ದುಂಜ, ಕೋಶಾಧಿಕಾರಿ ರಮೇಶ ಪೂಜಾರಿ ವಂಜಾರೆ, ಅರ್ಚಕ ಜಗನ್ನಾಥ ವಂಜಾರೆ,ವಿವಿಧ ಸಂಘದ
ಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಭಜನಾ ಮಂಡಳಿ ಗೌರವಾಧ್ಯಕ್ಷ ಉಮೇಶ್ ಕೇಲ್ದಡ್ಕ ಸ್ವಾಗತಿಸಿ, ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.