ಬೆನಕ ಹೆಲ್ತ್ ಸೆಂಟರ್ ಗೆ ಕಾಯಕಲ್ಪ ಪ್ರಶಸ್ತಿ ಪ್ರದಾನ ಸಮಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಉಜಿರೆ ಬೆನಕ ಹೆಲ್ತ್ ಸೆಂಟರ್ ಗೆ ಈ ಬಾರಿ ಸ್ವಚ್ಛತೆ ಮತ್ತು ಇತರ ಸುವ್ಯವಸ್ಥಿತ ನಿರ್ವಹಣೆಗೆ ಕಾಯಕಲ್ಪ ಪ್ರಶಸ್ತಿ ಬಂದಿದ್ದು ಅದರ ಹಸ್ತಾಂತರ ಮತ್ತು ಆಸ್ಪತ್ರೆಯ ಕಡೆಯಿಂದ ಪ್ರಾರಂಭಿಸಿರುವ ಹೋಮ್ ಹೆಲ್ತ್ ಕೇರ್ ಸೇವೆ ಪ್ರಾರಂಭ ಉದ್ಘಾಟನೆ ಡಿ.18 ರಂದು ನಡೆಯಲಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಆಸ್ಪತ್ರೆಯ ಮೆಡಿಕಲ್‌ಡೈರೆಕ್ಟರ್ ಡಾ. ಕೆ ಗೋಪಾಲಕೃಷ್ಣ ತಿಳಿಸಿದರು.

ಕಾಯಕಲ್ಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ, ಬೆನಕ ಹೋಂ ಹೆಲ್ತ್‌ಕೇರ್ ಸೇವೆಯ ಉದ್ಘಾಟನೆಯನ್ನು ಕನ್ಯಾಡಿ-|| ಸೇವಾ ಭಾತರಿ ಅಧ್ಯಕ್ಷ ವಿನಾಯಕ ರಾವ್ ನೆರವೇರಿಸಲಿದ್ದು, ಬೆನಕ ಹೆಲ್ತಕೇರ್‌ನ ಮೆಡಿಕಲ್ ಡೈರಕ್ಟರ್ ಡಾ| ಕೆ. ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯೆ ನಮಿತಾ, ತಾ.ಪಂ ಸದಸ್ಯ ಶಶಿಧರ್ ಎಂ ಕಲ್ಮಂಜ, ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಉಜಿರೆ ಅಭಿವೃದ್ಧಿ ಅಧಿಕಾರಿ ಪ್ರಕಾಶ ಶೆಟ್ಟಿ ಉಪಸ್ಥಿತರಿದ್ದಾರೆ ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್ ಜಿ ಭಟ್, ಜನರಲ್ ಮೆನೇಜರ್ ದೇವಸ್ಯ ಉಪಸ್ಥಿತರಿದ್ದರು.  

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.