ಡಿ.14: ಬಳಂಜದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬಳಂಜ : ಬಳಂಜ ವಾಲಿಬಾಲ್ ಕ್ಲಬ್ ಇದರ ವತಿಯಿಂದ ಹಾಗೂ ತಾಲೂಕು ವಾಲಿಬಾಲ್ ಅಸೋಸಿಯೇಶನ್ ರವರ ಸಹಯೋಗದೊಂದಿಗೆ ತಾಲೂಕು ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಬಿ.ವಿ.ಎಲ್ ಟ್ರೋಫಿ- 2019 ಮತ್ತು ಬಿ.ವಿ.ಎಲ್ ಸೀಸನ್ 3 ಇದರ ಬಿಡ್ಡಿಂಗ್ ಪ್ರಕ್ರಿಯೆಯು ಡಿ.14 ರಂದು ಬಳಂಜ ಶ್ರೀ ದೈವ ಕೊಡಮಣಿತ್ತಾಯ ಆವರಣದಲ್ಲಿ ಜರುಗಲಿದೆ.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ, ಪ್ರಗತಿಪರ ಕೃಷಿಕ ತಿಮ್ಮಪ್ಪ ಪೂಜಾರಿ ನಿಟ್ಟಡ್ಕ ನಾಲ್ಕೂರು, ವೇಣೂರು ಆರಕ್ಷಕ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಲೋಲಾಕ್ಷ, ಅಳದಂಗಡಿ ಖ್ಯಾತ ವೈದ್ಯರಾದ ಡಾ| ಎನ್.ಎಂ ತುಳಪುಳೆ, ಡಾ| ಶಶಿಧರ ಡೊಂಗ್ರೆ, ಬೆಳ್ತಂಗಡಿ ಜೆಸಿಐ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಸಿ.ಎ ಬ್ಯಾಂಕ್‌ನ ಅಧ್ಯಕ್ಷರಾದ ಶಿವಭಟ್ ಅಳದಂಗಡಿ, ವಸಂತ ಮಜಲು ಕಳಿಯ, ಸುಂದರ ಹೆಗ್ಡೆ ವೇಣೂರು, ವಾಲಿಬಾಲ್ ಅಸೋಸಿಯೇಶನ್ ಕಾರ್ಯದರ್ಶಿ ಗುರುಪ್ರಸಾದ್ ಭಟ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು, ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ, ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ನಡೆಯಲಿದೆ.
ಪಂದ್ಯಾಟದ ವಿಜೇತರಿಗೆ ರೂ.4443, ರೂ.3333, ರೂ.1111 ನಗದು ಹಾಗೂ ಬಿ.ವಿ.ಎಲ್ ಟ್ರೋಫಿ ಸಿಗಲಿದೆ. ಪ್ರವೇಶ ಶುಲ್ಕ ರೂ 300 ಆಗಿದ್ದು ತಾಲೂಕಿನ ಆಟಗಾರರಿಗೆ ಭಾಗವಹಿಸಲು ಮಾತ್ರ ಅವಕಾಶವಿದೆ ಎಂದು ಬಳಂಜ ವಾಲಿಬಾಲ್ ಕ್ಲಬ್‌ನ ಅಧ್ಯಕ್ಷ ರಾಕೇಶ್ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.