ಬೆಳ್ತಂಗಡಿ: ಪೂರ್ವದ್ವೇಷದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಉದಯ ನಗರ ನಿವಾಸಿ ಮುಹಮ್ಮದ್ ಶೆರೋಜ್ ಅವರಿಗೆ ಲಾಲದ ಶೇಖ್ ಮುಹಮ್ಮದ್, ಸಲೀಂ ಮತ್ತು ಶಮೀರ್ ಮತ್ತು ಇತರರು ಸೇರಿ, ಕೋರ್ಟ್ ರಸ್ತೆಯ ಜಾಮಿಯಾ ಮಸ್ಜಿದ್ ವಠಾರದಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುವಾಗ ಏಕಾಏಕಿ ದಾಳಿ ನಡೆಸಿ ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ಬೆಳ್ತಂಗಡಿಯಲ್ಲಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಳು ಶೇರೋಝ್ ಅವರಿಗೆ ಕೈಯಿಂದ ಹಲ್ಲೆ ನಡೆಸಿ, ನೆಲಕ್ಕೆ ದೂಡಿಹಾಕಿ, ಕಾಲಿನಿಂದ ತುಳಿದ ಪರಿಣಾಮ ಗಾಯಗೊಂಡಿದ್ದ ಅವರು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅಸಂಜ್ಞೆಯ ದೂರು ಅರ್ಜಿಯಲ್ಲಿ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದಂತೆ ಹಲ್ಲೆಗೈದವರ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ.