ಬೆಳ್ತಂಗಡಿ: ವಿವಿಧ ಕಾಮಗಾರಿಗಳ ಶಂಕು ಸ್ಥಾಪನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ

ಬೆಳ್ತಂಗಡಿ: ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಂಕು ಸ್ಥಾಪನಾ ಸಮಾರಂಭವು ಉಜಿರೆ ರತ್ನವರ್ಮ ಹೆಗ್ಗಡೆ  ಕ್ರೀಡಾಂಗಣದಲ್ಲಿ ಡಿ.8 ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ‌ ಹರೀಶ್ ಪೂಂಜ‌ ವಹಿಸಿದ್ದರು.


ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿ, ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕು ಸ್ಥಾಪನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಪ್ರಸ್ತಾವಿಕ ಭಾಷಣ ಮಾಡಿ, ಅಭಿವೃದ್ಧಿ ಬೆಸುಗೆ ಪುಸ್ತಕ ಬಿಡುಗಡೆಗೊಳಿಸಿದರು. 

ಗುಡ್ಡ ಕುಸಿದು ಸಾವನ್ನಪ್ಪಿದವರಿಗೆ 3ಲಕ್ಷ ರೂ.ಪರಿಹಾರ ಘೋಷಣೆ: ಒಡಿಯೂರು ಬಳಿ ನಿನ್ನೆ ನಡೆದ ಗುಡ್ಡ ಕುಸಿತದಿಂದ ಸಾವನ್ನಪ್ಪಿದ ಮೂರು ಮಂದಿಯ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ ಮೂರು ಲಕ್ಷದಂತೆ ಪರಿಹಾರ ಘೋಷಿಸುತ್ತಿದ್ದೇನೆ. ಗಾಯಾಳು ಒಬ್ಬರ ಸ್ಥಿತಿ ಗಂಭೀರವಾಗಿದ್ದು ಅವರಿಗೆ ಒಂದು ಲಕ್ಷ ನೀಡುವುದಾಗಿ ತಿಳಿಸಿದರು.

ನಾಳಿನಿಂದ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಅಂತ್ಯ: ನಾಳೆ ಉಪಚುನಾವಣೆ ಫಲಿತಾಂಶ ಹೊರಬರಲಿದ್ದು ಹದಿನೈದರಲ್ಲಿ ಹದಿಮೂರು ಸ್ಥಾನ ಗೆಲ್ಲಲಿದ್ದೇವೆ.
ಆ ಮೂಲಕ ರಾಜ್ಯದ ಅಸ್ಥಿರ ರಾಜಕಾರಣ ಕೊನೆಗೊಂಡು ಮುಂದಿನ ಮೂರುವರೆ ವರ್ಷ ಸುಭದ್ರ ಸರಕಾರ ನೀಡಲಿದ್ದೇವೆ. ಈ ವೇಳೆ ರಾಜ್ಯವನ್ನು ಮಾದರಿ ರಾಜ್ಯವಾಗಿ ಪರಿವರ್ತಿಸಲಾಗುವುದು. ಜಿಲ್ಲೆಯ ಅಭಿವೃದ್ಧಿಗೂ ಮುಂದಿನ ಬಜೆಟ್ ನಲ್ಲಿ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದು ಸಿ.ಎಂ ಹೇಳಿದರು.

ವೇದಿಕೆಯಲ್ಲಿ ಉಪಮುಖ್ಯಮಂತ್ರಿಗಳು, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ,  ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಅಂತರ್ಜಲ ಅಭಿವೃದ್ಧಿ ಸಚಿವ ಜೆ.ಸಿ‌ ಮಾಧು ಸ್ವಾಮಿ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ‌ ಸಿಂಧು ಬಿ ರೂಪೇಶ್, ಜಿ.ಪಂ ಸಿಇಒ ಡಾ. ಸೆಲ್ವಮಣಿ, ಜಿಲ್ಲಾ ಪೊಲೀಸ್ ಎಸ್ ಪಿ ಬಿ.ಎಂ ಲಕ್ಷ್ಮೀ ಪ್ರಸಾದ್, ಜಿಲ್ಲೆಯ ಶಾಸಕರುಗಳಾದ ರಾಜೇಶ್ ನಾಯ್ಕ್ ಬಂಟ್ವಾಳ, ಸಂಜೀವ ಮಠಂದೂರು ಪುತ್ತೂರು, ಭರತ್ ಶೆಟ್ಟಿ ಮಂಗಳೂರು, ವೇದವ್ಯಾಸ ಕಾಮತ್ ಮಂಗಳೂರು, ಎಡಿಸಿ ರೂಪಾ, ಪುತ್ತೂರು ಎ.ಸಿ ಡಾ. ಯತೀಶ್ ಉಳ್ಳಾಲ್, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್ ಸಾರ್, ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಸ್ವಾಗತಿಸಿ,ಗೇರುಕಟ್ಟೆ ಸ.ಸಂ.ಪ.ಪೂ ಕಾಲೇಜು ದೈಹಿಕ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿ, ಅಪರ ಜಿಲ್ಲಾಧಿಕಾರಿ ಎಂ ಜೆ ರೂಪಾ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.