ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ದೀರ್ಘ ವರ್ಷ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸಿದ್ದ ನಾಗರಾಜ ಆರಿಗಾ ಅವರ ಪತ್ನಿ, ನೆಲ್ಯಾಡಿ ಬಳಿಯ ಇಚ್ಲಂಪಾಡಿ ಮಂಜುಶ್ರೀ ನಿಲಯದ ಕುಶಲಾ ಆರಿಗಾ (75ವ.) ಅವರು ನಿಧನರಾಗಿದ್ದಾರೆ.
ಮೃತರು ಕೆಲ ವರ್ಷಗಳಿಂದ ಆರೋಗ್ಯ ಸಮಸ್ಯೆಗೆ ತುತ್ತಾಗಿ ಚಿಕಿತ್ಸೆಯಲ್ಲಿದ್ದರೆಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಮೃತರು ಪತಿ, ಇಚ್ಲಂಪಾಡಿ ಹಾಲು ಉತ್ಪಾದಕ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನಾಗರಾಜ ಆರಿಗಾ, ಮಕ್ಕಳಾದ ಶರ್ಮಿಳಾ, ರಶ್ಮಿ ಮತ್ತು ಶಿಲ್ಪಾ ಹಾಗೂ ಬಂಧುವರ್ಗದವರನ್ನ ಅಗಲಿದ್ದಾರೆ.
ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಅಂತಿಮದರ್ಶನ ಪಡೆದಿದ್ದಾರೆ. ಕ್ಷೇತ್ರದ ಧರ್ಮಾಧಿಕಾರಿ ಸಹಿತ ಗಣ್ಯರು ಸಂತಾಪ ಸೂಚಿಸಿದ್ದಾರೆ.