ಬೆಳ್ತಂಗಡಿ: ಶಂಕುಸ್ಥಾಪನೆಗೊಳ್ಳಿರುವ ಕಾಮಗಾರಿಗೆ ಸರಕಾರದ ಆದೇಶ ಬೇಕು. ಡಿ.8 ರಂದು ಶಂಕುಸ್ಥಾಪನೆಯಾಗುವ ಕಾಮಗಾರಿಗೆ ಸರಕಾರದ ಆದೇಶ ಇಲ್ಲ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಇಂದು(ಡಿ.6) ರಂದು ತಮ್ಮ ಕಛೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ದ.ಕ ಜಿಲ್ಲೆಯಲ್ಲಿ ಇರುವ ಇತರ 7 ಶಾಸಕರಿಗೆ ಬಾರದ ಅನುದಾನ ಬೆಳ್ತಂಗಡಿ ತಾಲೂಕಿನ ಶಾಸಕರಿಗೆ ಬರಲು ಹೇಗೆ ಸಾಧ್ಯ ಎಂದರು. ರೂ.347ಕೋಟಿ ಕಾಮಗಾರಿಗಳಲ್ಲಿ ತನ್ನ ಶಾಸಕರ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳೂ ಸೇರಿದೆ. ಕೆಲವು ಕಾಮಗಾರಿಗಳು ನಡೆಯುತ್ತಾ ಇದೆ.
ಬೆಳ್ತಂಗಡಿ ನಗರ ಪಂ.ಗೆ ತನ್ನ ಶಾಸಕನ ಅವಧಿಯಲ್ಲಿಯೇ 10ಕೋಟಿ ರೂ ನಗರಾಭಿವೃದ್ಧಿ ಇಲಾಖೆಯಿಂದ ಮಂಜೂರುಗೊಂಡು ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬೆಳ್ತಂಗಡಿಗೆ ಬಂದಿರುವ ಸಂದರ್ಭ ಒಂದು ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದರು. ಅಂತೆಯೇ ತಾಲೂಕಿನ ವಿವಿಧ ಗ್ರಾಮಗಳ ರಸ್ತೆ, ಕಿಂಡಿ ಅಣೆಕಟ್ಟು, ಕಾಮಗಾರಿಗಳು ನಡೆಯುತ್ತಾ ಇದ್ದು ಈ ಕಾಮಗಾರಿಗಳು ಡಿ.8 ರಂದು ಶಿಲಾನ್ಯಾಸ ಮಾಡುವುದು ಎಂದು ಪತ್ರಿಕೆ ಮೂಲಕ ತಿಳಿಯಿತು. ಇದು ಯಾವ ನ್ಯಾಯ ಎಂದರು.
ಶಿಲಾನ್ಯಾಸಗೊಳ್ಳಲಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಜಿಲ್ಲಾಧಿಕಾರಿಗಳ ಗಮನ ತರಲಾಗುವುದು. ಈ ಎಲ್ಲಾ ಕಾಮಗಾರಿಗಳ ವಿವರಗಳನ್ನು ಪಡೆದುಕೊಂಡು 15 ದಿನಗಳೊಳಗೆ ಇನ್ನೊಮ್ಮೆ ಪತ್ರಿಕಾಗೋಷ್ಠಿ ಕರೆದು ಜನರಿಗೆ ತಿಳಿಸಲಾಗುವುದು ಎಂದರು. ಈ ಹೋರಾಟವನ್ನು ಕಾಂಗ್ರೇಸ್ ಜಿಲ್ಲಾ ಅಧ್ಯಕ್ಷರು ಮಾಡಬೇಕಿತ್ತು ಆದರೆ ಅವರು ಈ ಬಗ್ಗೆ ಚಕಾರ ಎತ್ತುವುದಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳಾದ ನಿರಂಜನ ಬಾವಂತಬೆಟ್ಟು, ಸತೀಶ್ ಕಾಶಿಪಟ್ಣ, ನವೀನ್ ರೈ ಬಾರ್ಯ, ಶ್ರೀಪತಿ ಭಟ್ ಹೊಸಂಗಡಿ ಉಪಸ್ಥಿತರಿದ್ದರು.