ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಕಕ್ಕಿಂಜೆ ಶಾಖೆಯು ಸ್ಥಳಾಂತರ

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಕಕ್ಕಿಂಜೆ ಶಾಖೆಯು ಡಿ.5ರಂದು, ಕಕ್ಕಿಂಜೆಯ ಉಳ್ಳಾಳ್ತಿ ಕಾಂಪ್ಲೆಕ್ಸ್ 1ನೇ ಮಹಡಿ, ಸ್ಥಳಾಂತರಗೊಂಡು ಶುಭಾರಂಭಗೊಂಡಿರುತ್ತದೆ. ಸಂಘದ ಅಧ್ಯಕ್ಷರಾದ ಎನ್ ಪದ್ಮನಾಭ ಮಾಣಿಂಜ, ನಿರ್ದೇಶಕರೂ ಹಾಗೂ ಮಾಜಿ ಶಾಸಕರೂ ಆಗಿರುವ ಕೆ ವಸಂತ ಬಂಗೇರ, ಮುಂಡಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿರುವ ಅನಂತ ಭಟ್ ಮಚ್ಚಿಮಲೆ, ಬೆಳ್ತಂಗಡಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಕನ್ಯ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷರಾದ ದಾಮೋದರ ಸಾಲಿಯಾನ್ ನಿರ್ದೇಶಕರಾದ ಭಗೀರಥ ಜಿ, ಧರ್ಣಪ್ಪ ಪೂಜಾರಿ, ಚಂದ್ರಶೇಖರ್ ಸಂಘದ ವಿಶೇಷಾಧಿಕಾರಿಯಾದ ಯಂ ಮೋನಪ್ಪ ಪೂಜಾರಿ, ಕಂಡೆತ್ಯಾರು, ಮುಖ್ಯಾಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಮತ್ತು ಇತರ ಶಾಖೆಗಳ ಶಾಖಾ ವ್ಯವಸ್ಥಾಪಕರು ಉಪಸ್ಥಿತರಿದ್ದರು. ಕಟ್ಟಡ ಮಾಲೀಕರಾದ ಜಯನ್ನಾಥ್ ಹಾಗೂ ಶಾಖೆಯ ಕಾನೂನು ಸಲಹೆಗಾರರಾದ ಮನೋಹರ್ ಕುಮಾರ್ ಇಳಂತಿಲ, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರು ಹಾಗೂ ಗ್ರಾಹಕ ಬಾಂಧವರು ಭಟಿ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕರಾದ  ರೂಪಲತಾ, ಮತ್ತು ಸಿಬ್ಬಂದಿ ವರ್ಗ ಹಾಗೂ ದೈನಿಕ ಠೇವಣಿ ಸಂಗ್ರಾಹಕರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.