ರಕ್ತೇಶ್ವರಿ ಪದವು ಭಜನಾ ಮಂಡಳಿ ನಗರ ಭಜನೆ ಆರಂಭ

ನ್ಯಾಯತರ್ಪು : ಇಲ್ಲಿಯ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ವತಿಯಿಂದ 1 ವಾರದ ನಗರ ಭಜನಾ ಕಾರ್ಯಕ್ರಮ ಡಿ.3 ರಂದು ಸಂಜೆ ಭಜನಾ ಮಂಡಳಿ ವಠಾರದಲ್ಲಿ ಜರಗಿತು.ಪ್ರಗತಿಪರ ಕೃಷಿಕ,ಯಕ್ಷಗಾನ ಅರ್ಥದಾರಿ ಜನಾರ್ದನ ಪೂಜಾರಿ ವಂಜಾರೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇವರಲ್ಲಿ ಭಕ್ತಿ, ನಂಬಿಕೆ, ಶ್ರದ್ಧೆಯಿಂದ ಮಾಡುವ ಭಜನೆಗೆ ತುಂಬಾ ಮಹತ್ವವಿದೆ.ಭಜನೆ ಕಾರ್ಯ ದಲ್ಲಿ ಯುವ ಪೀಳಿಗೆಯ ಬಾಗವಹಿಸುವುದರಿಂದ ದುಶ್ಚಟಗಳಿಂದ ದೂರವಾಗಿ ಸಮಾಜಕ್ಕೆ ಉತ್ತಮ ಗೌರವ ಪ್ರಜೆಗಳಾಗಿ ಬಾಳ ಬಹುದು ಎಂದು ಹೇಳಿದರು.ಭಜನಾ ಮಂಡಳಿ ಅಧ್ಯಕ್ಷ ಕುಶಾಲಪ್ಪ ಗೌಡ ಕಲಾಯಿತೋಟ್ಟು, ನಾಳ ದುರ್ಗಾಪರಮೇಶ್ವರಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ,ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿನೇಶ ಗೌಡ ಕಲಾಯಿತೋಟ್ಟು, ಭಾರತಿ ವಂಜಾರೆ,ಎಸ್.ಡಿ.ಎಮ್.ಸಿ ಅಧ್ಯಕ್ಷ ವಿಜಯ ಗೌಡ ಕಲಾಯಿತೋಟ್ಟು, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಗಿರಿಯಪ್ಪ ಗೌಡ ಕಲಾಯಿತೋಟ್ಟು,ಅರಣ್ಯ ಸಮಿತಿ ಅಧ್ಯಕ್ಷ ವಸಂತ ಕುಮಾರ್ ವಂಜಾರೆ,ನೇತಾಜಿ ಕ್ರೀಡಾ ಸಂಘದ ಕೋಶಾಧಿಕಾರಿ ವಿವೇಕ್ ಬಂಗೇರ ವಂಜಾರೆ, ಅಂಗನವಾಡಿ ಕಾರ್ಯಕರ್ತೆ ನಾಗವೇಣಿ,ವಿವಿಧ ಸಂಘದ ಪದಾಧಿಕಾರಿಗಳು,ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಭಜನಾ ಮಂಡಳಿ ಗೌರವ ಅಧ್ಯಕ್ಷ ಉಮೇಶ್ ಕೇಲ್ದಡ್ಕ ಸ್ವಾಗತಿಸಿ, ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.