ಜೆಸಿಐ ಬೆಳ್ತಂಗಡಿ ಮಂಜುಶ್ರೀ: ಅಧ್ಯಕ್ಷರಾಗಿ ಅಭಿನಂದನ್ ಹರೀಶ್ ಕುಮಾರ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಸಂಸ್ಥೆಯು ಕಳೆದ 42 ವರ್ಷಗಳಿಂದ ವಿವಿಧ ಸಮಾಜಮುಖಿ ಕೆಲಸ -ಕಾರ್ಯಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಗುರುತಿಸಿಕೊಂಡ ಸಂಸ್ಥೆ. ಬೆಳ್ತಂಗಡಿ ಮಂಜುಶ್ರೀ ಸಂಸ್ಥೆಯ 2020 ಸಾಲಿಗೆ ಪದಾಧಿಕಾರಿಗಳ ಆಯ್ಕೆಯು ಪೂರ್ವಾಧ್ಯಕ್ಷರು ಹಾಗೂ ಜೆಸಿಐನ ಪದಾಧಿಕಾರಿಗಳ ಸಮ್ಮುಖದಲ್ಲಿ ಇತ್ತೀಜೆಗೆ ಜೆಸಿ ಭವನ ಬೆಳ್ತಂಗಡಿಯಲ್ಲಿ ನಡೆಯಿತು.


ಅಧ್ಯಕ್ಷರಾಗಿ ಯುವ ಉದ್ಯಮಿ, ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷ, ಹಲವಾರು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಸಂಘಟಕರಾದ ಅಭಿನಂದನ್ ಹರೀಶ್ ಕುಮಾರ್, ಕಾರ್ಯದರ್ಶಿಯಾಗಿ ಯುವ ಉದ್ಯಮಿ ಸ್ವರೂಪ್ ಶೇಖರ್ ನಾವೂರು, ಕೋಶಾಧಿಕಾರಿಯಾಗಿ ಯುವ ಉದ್ಯಮಿ ಶೀತಲ್ ಜೈನ್ ಶಿರ್ಲಾಲು ಆಯ್ಕೆಯಾಗಿದ್ದಾರೆ.
ನಿಕಟಪೂರ್ವಧ್ಯಕ್ಷರಾಗಿ ಪ್ರಶಾಂತ್ ಲಾಲ, ಉಪಾಧ್ಯಕ್ಷರಾಗಿ ಪ್ರಸಾದ್ ಬಿ.ಎಸ್ ಕಕ್ಕಿಂಜೆ, ರಂಜಿತ್ ಹೆಚ್.ಡಿ. ಸುಧಾಮ ಬಳಂಜ, ವಿಶಾಲ್ ಅಗಸ್ಟಿನ್, ಗಣೇಶ್ ಶಿರ್ಲಾಲು, ವಿಜಯ್ ನಿಡಿಗಲ್, ಜೊತೆ ಕಾರ್ಯದರ್ಶಿಯಾಗಿ ಆಶ್ರಯ್ ಅಜ್ರಿ, ಜೇಸಿರೆಟ್ ಅಧ್ಯಕ್ಷರಾಗಿ ಹೇಮಾವತಿ.ಕೆ, ಜೂನಿಯರ್ ಜೆಸಿ ಅಧ್ಯಕ್ಷರಾಗಿ ಹರಿಕಿರಣ್, ಜೇಸಿರೇಟ್ ಸಂಯೋಜಕಿಯಾಗಿ ಚಿತ್ರಪ್ರಭಾ, ಜೂನಿಯರ್ ಜೇಸಿ ಸಂಯೋಜಕರಾಗಿ ಸುಶೀಲ್ ಕುಮಾರ್, ಘಟಕ ಸಂಯೋಜಕರಾಗಿ ಪ್ರೀತಮ್ ಶೆಟ್ಟಿ, ಸೌಮ್ಯ ಶೆಟ್ಟಿ, ಕ್ರೀಡಾ ಸಂಯೋಜಕರಾಗಿ ಶಂಕರ್ ರಾವ್, ದೀಪಕ್ ಹೆಚ್.ಡಿ, ಟುವಿತ್ ಸಾಲಿಯನ್, ಸಾಂಸ್ಕೃತಿಕ ಸಂಯೋಜಕರಾಗಿ ಜಿತೇಶ್, ಸುಧೀರ್ ಜೈನ್, ಕಾನೂನು ಸಲಹೆಗಾರರಾಗಿ ಪ್ರಶಾಂತ್, ಮೀಡಿಯಾ ಕವರೇಜ್ ನಿರ್ದೇಶಕರಾಗಿ ದಾಮೋದರ್ ಕುಲಾಲ್, ಗುರುರಾಜ್ ಎಸ್, ಸೋಶಿಯಲ್ ಮೀಡಿಯ ನಿರ್ದೇಶಕರಾಗಿ ಜಯರಾಜ್ ನಡಕ್ಕರ, ರೋಹಿತಾಕ್ಷ, ಇವೆಂಟ್ ಪ್ರಮೋಶನ್ ನಿರ್ದೇಶಕರಾಗಿ ಗಣೇಶ್ ಚಾರ್ಮಾಡಿ, ಆಶಾ ಪ್ರಶಾಂತ್, ಎಂಪವರಿಂಗ್ ಯೂತ್ ನಿರ್ದೇಶಕರಾಗಿ ರೇಖಾ ವಿನ್ಸೆಂಟ್, ಸಚಿನ್ ಸಾಲಿಯಾನ್ ಆಯ್ಕೆಯಾಗಿದ್ದಾರೆ.

ಡಿ.7ಪದಗ್ರಹಣ ಸಮಾರಂಭ

2020 ನೇ ಸಾಲಿನ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ ಮತ್ತು ತಂಡದ ಪದಗ್ರಹಣ ಸಮಾರಂಭವು ಡಿ.7 ರಂದು ಸಂಜೆ ಗಂಟೆ 7 ರಿಂದ ಜೇಸಿ ಭವನದಲ್ಲಿ ನಡೆಯಲಿದೆ. ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಸ.ಪ್ರ.ದ.ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಆಂಟೋನಿ.ಪಿ ಹಾಗೂ ವಲಯ ಉಪಾಧ್ಯಕ್ಷ ಮೇದವಿ ಎಂ ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.