ರಕ್ತೇಶ್ವರಿ ಪದವು ನೇತಾಜಿ ಕ್ರೀಡಾ ಸಂಘದ ಕಟ್ಟಡಕ್ಕೆ10 ಸಾವಿರ ದೇಣಿಗೆ

ನ್ಯಾಯತರ್ಪು : ಇಲ್ಲಿಯ ನೇತಾಜಿ ಕ್ರೀಡಾ ಸಂಘದ ನೂತನ ಕಟ್ಟಡ ನಿರ್ಮಾಣ ಕೆಲಸಕ್ಕೆ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಗೂ ಉದ್ಯಮಿ ವಸಂತ ಮಜಲು ಸುಮಾರು 10 ಸಾವಿರ ರೂಪಾಯಿ ಚೆಕ್ಕುನ್ನು ಡಿ.4 ದೇಣಿಗೆಯಾಗಿ ನೀಡಿದರು.ಈ ಸಂದರ್ಭದಲ್ಲಿ ನೇತಾಜಿ ಕ್ರೀಡಾ ಸಂಘದ ಗೌರವಾಧ್ಯಕ್ಷ ಭಾರತೀಯ ಭೂಸೇನೆ ನಿವೃತ್ತ ಜೆ.ಸಿ.ಓ.ದಿನೇಶ ಗೌಡ ಕಲಾಯಿತೋಟ್ಟು, ಕ್ರೀಡಾ ಸಂಘದ ಅಧ್ಯಕ್ಷ ಸಿದ್ದಪ್ಪ ಗೌಡ ಹಾಕೋಟೆ ಇವರು ದೇಣಿಗೆಯನ್ನು ಸಂಘದ ಪರವಾಗಿ ಸ್ವೀಕರಿಸಿದರು.ನೂತನ ಕಟ್ಟಡ ನಿರ್ಮಾಣ ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ರಚನೆಯಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ದೇಣಿಗೆ ನೀಡಿ ಸಹಕರಿಸಿದ ವಸಂತ ಮಜಲು ಅವರಿಗೆ ನೇತಾಜಿ ಕ್ರೀಡಾ ಸಂಘದ ಪರವಾಗಿ ಅಭಿನಂದನೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.