HomePage_Banner_
HomePage_Banner_

ಜಿಎಸ್‌ಬಿ ಸಮಾಜ ಸಂಘದಿಂದ ಡಿ. 8 ಕ್ಕೆ ಉಜಿರೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಶ್ರೀ ರಾಮಾಂಜನೆಯ ಜಿಎಸ್‌ಬಿ ಕ್ರೀಡಾ ಸಂಘ ಬೆಳ್ತಂಗಡಿ ತಾಲೂಕು ಮತ್ತು ಜಿಎಸ್‌ಬಿ ಸರ್ವ ದೇವಸ್ಥಾನಗಳ ಒಕ್ಕೂಟ ಮಂಗಳೂರು ಇವರ ನೇತೃತ್ವದಲ್ಲಿ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇದರ ನುರಿತ ವೈದ್ಯ ಡಾ| ಚಕ್ರಪಾಣಿ ಎಂ, ಡಾ| ಪದ್ಮನಾಭ ಕಾಮತ್, ಡಾ| ಸುರೇಂದ್ರ ಕಾಮತ್ ಹಾಗೂ ಡಾ| ಪ್ರವೀಣ್‌ಚಂದ್ರ ನಾಯಕ್ ಇವರ ಸಾರಥ್ಯದಲ್ಲಿ ಡಿ. 8 ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಶ್ರೀರಾಮ ಭಜನಾ ಮಂದಿರ ಉಜಿರೆಯಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಮೂರ್ಜೆ ವಿವೇಕಾನಂದ ಪ್ರಭು, ಗೌರವಾಧ್ಯಕ್ಷ ಪಾಂಡುರಂಗ ಭಂಡಾರ್ಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಿಬಿರದಲ್ಲಿ ಸಾಮಾನ್ಯ ರೋಗ ತಜ್ಞರು, ಹೃದ್ರೋಗ ತಜ್ಞರು, ಕಣ್ಣಿನ ತಜ್ಞರು, ಎಲುಬು ಮತ್ತು ಕೀಲು ತಜ್ಞರು, ಪೋಡಿಯಾಟ್ರಿಸ್ಟ್ (ಪಾದ ಹಾಗೂ ಪಾದದ ಕೀಲುಗಳ ತಜ್ಞರು), ಕಿವಿ-ಮೂಗು ಮತ್ತು ಗಂಟಲು ತಜ್ಞರು ಸೇರಿದಂತೆ 30 ರಷ್ಟು ನುರಿತ ವೈದ್ಯರ ತಂಡ ಭಾಗವಹಿಸಲಿದೆ. ಉಚಿತ ರಕ್ತ ಪರೀಕ್ಷೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಇದರಲ್ಲಿ ಜಿಎಸ್‌ಬಿ ಸಮಾಜ ಬಾಂಧವರಲ್ಲದೆ ಎಲ್ಲ ಸಮುದಾಯದವರೂ ಭಾಗಿಯಾಗಬಹುದಾಗಿದೆ. ಈ ಶಿಬಿರದಲ್ಲಿ ಹೆಚ್ಚಿನ ಚಿಕಿತ್ಸೆ ಆವಶ್ಯಕತೆ ಇದ್ದಲ್ಲಿ ಕೆ.ಎಂ.ಸಿ ಆಸ್ಪತ್ರೆಯಿಂದ ಹಸಿರುಕಾರ್ಡ್ ನೀಡಿ, ಅಲ್ಲಿ ಶಸ್ತ್ರ ಚಿಕಿತ್ಸೆಗೆ 10 ಸಾವಿರ ಮತ್ತು ಇತರ ಚಿಕಿತ್ಸೆಗೆ ೫ ಸಾವಿರ ರೂ. ಉಚಿತ ಸೌಲಭ್ಯ ವ್ಯವಸ್ಥೆಯೂ ಲಭಿಸಲಿದೆ ಎಂದರು.
ನಿತ್ಯ ಔಷಧಿ ಸೇವಿಸುವ ರೋಗಿಗಳಿಗೆ ಮಾಸಿಕ ನರೆವು ಚಿಂತನೆ
ಈಗಾಗಲೇ ಹಲವು ಸಮಾಜಮುಖಿಃ ಕಾರ್ಯಗಳಿಗೆ ನೆರವಾಗುತ್ತಿರುವ ನಮ್ಮ ಸಂಘ ನೆರೆ ಸಂತ್ರಸ್ತರ ನಿಧಿಗೆ 50 ಸಾವಿರ ರೂ. ದೇಣಿಗೆ ನೀಡಿದೆ. ಮುಂದಕ್ಕೆ ಬಿ.ಪಿ -ಶುಗರ್ ನಂತಹಾ ನಿತ್ಯ ಔಷಧಿ ಸೇವಿಸಬೇಕಾದ ತೀರಾ ಆರ್ಥಿಕ ಸಂಕಷ್ಟದಲ್ಲಿರುವ ರೋಗಿಗಳನ್ನು ಗುರುತಿಸಿ ಅಂತವರಿಗೆ ಮಾಸಿಕ ಔಷಧಿ ವೆಚ್ಚ ಭರಿಸುವ ಬಗ್ಗೆ ಚಿಂತನೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಂದೀಪ್ ಬಾಳಿಗಾ, ಶಶಿಧರ ಪೈ, ಪಾಂಡುರಂಗ ಬಾಳಿಗಾ, ವೀರಸಿಂಹ ಬಾಳಿಗಾ, ಕೆ.ಎಂ.ಸಿ ಆಸ್ಪತ್ರೆ ಮಾರ್ಕೆಟಿಂಗ್ ವಿಭಾಗದ ಪ್ರದೀಪ್ ನಾಯಕ್ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.