HomePage_Banner_
HomePage_Banner_

ಲಯನ್ಸ್ ಜಿಲ್ಲೆ 98 ಕ್ಲಬ್‌ಗಳ ಮೂಲಕ 3900 ಸದಸ್ಯರು ಸಕ್ರೀಯವಾಗಿ ಸಮಾಜಸೇವೆಗೈಯ್ಯುತ್ತಿದ್ದಾರೆ: ಗವರ್ನರ್ ಗೋಮ್ಸ್

ಬೆಳ್ತಂಗಡಿ ಲಯನ್ಸ್ ಕ್ಲಬ್‌ಗೆ ಜಿಲ್ಲಾ ರಾಜ್ಯಪಾಲ ಲ| ರೊನಾಲ್ಡ್ ಗೋಮ್ಸ್ ಅಧಿಕೃತ ಭೇಟಿ

ಬೆಳ್ತಂಗಡಿ: 4 ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆಯಲ್ಲಿ ಒಟ್ಟು 98 ಲಯನ್ಸ್ ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿದ್ದು 3900 ಕ್ರಿಯಾಶೀಲ ಸದಸ್ಯರಿದ್ದಾರೆ. ಈ ಜಿಲ್ಲೆಯ ರಾಜ್ಯಪಾಲನಾಗಿ ನನ್ನ ಧ್ಯೇಯವಾಗಿರುವ ಕೆರೆಗಳನ್ನು ಉಳಿಸಿ, 1 ಲಕ್ಷ ಗಿಡಗಳ ನೆಡುವುದು, ಹಸಿವು ನಿವಾರಣೆ ಕಾರ್ಯಕ್ರಮ ಮತ್ತು ಹದಿಹರೆಯದ ಶಿದ್ಯಾರ್ಥಿಗಳಿಗೆ ಬೋಧಿಸುವ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಿ ಅವರನ್ನು ಪರಿಪಕ್ವರನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಕ್ಲಬ್‌ಗಳು ಕಾರ್ಯಚಟುವಟಿಕೆ ಹಮ್ಮಿಕೊಳ್ಳುತ್ತಿದೆ ಎಂದು ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಇದರ ಜಿಲ್ಲಾ ರಾಜ್ಯಪಾಲ ಲ| ರೊನಾಲ್ಡ್ ಗೋಮ್ಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಳ್ತಂಗಡಿ ಘಟಕದಿಂದ ಅತ್ಯುತ್ತಮ ಸೇವಾ ಕಾರ್ಯ:
ಡಿ. 1 ರಂದು ಹಳೆಬೀಡಿನಲ್ಲಿ ನೂತನ ಘಟಕ ಉದ್ಘಾಟಿಸಿ ನಾನು ಡಿ 2 ಕ್ಕೆ ಬೆಳ್ತಂಗಡಿಗೆ ಆಗಮಿಸಿದ್ದೇನೆ. ಬೆಳಿಗ್ಗೆ 9 ಗಂಟೆಯಿಂದ ಆರಂಭಗೊಂಡಿರುವ ಸೇವಾ ಚಟುವಟಿಕೆಗಳನ್ನು ನನ್ನನ್ನು ಸಂತೋಷಗೊಳಿಸಿದೆ. ಈ ಘಟಕ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ.
ಲಯನ್ಸ್ ಭವನಕ್ಕೆ ಧ್ವನಿವರ್ಧಕ ಮತ್ತು ಇನ್‌ವರ್ಟರ್ ಕೊಡುಗೆ, ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಘಟಕಕ್ಕೆ ಎ.ಸಿ ಕೊಡುಗೆ, ಕೇಲ್ತಾಜೆಯಲ್ಲಿ ಪ್ರ್ರಯಾಣಿಕರ ತಂಗುದಾಣ ಉದ್ಘಾಟನೆ, ನಡ ಶಾಲೆಗೆ ಕ್ರೀಡೋಪಕರಣ ಕೊಡುಗೆ, ನಡ ಪ್ರೌಢ ಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆ, ಪಡ್ಲಾಡಿ ಪ್ರಾಥಮಿಕ ಶಾಲೆಗೆ ಅಡುಗೆ ಪರಿಕರ ವಿತರಣೆ, ಕನ್ನಾಜೆ ಅಂಗನವಾಡಿಗೆ ಪೀಠೋಪಕರಣ ಕೊಡುಗೆ ನಡೆದಿದೆ ಎಂದರು.
ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಮಾದರಿಯಾಗಿದೆ:
ಇದೇ ವೇಳೆ ಮಾತನಾಡಿದ ಜಿಲ್ಲಾ ರಾಜ್ಯಪಾಲ ರೊನಾಲ್ಡ್ ಐಸಾಕ್ ಗೂಮ್ಸ್ ಅವರು, ಸರಕಾರಿ ಆಸ್ಪತ್ರೆ ಎಂದರೆ ಜನರಿಗೆ ಒಂದು ತರಹದ ತಾತ್ಸಾರ ಭಾವನೆ ಇರುತ್ತದೆ. ಆದರೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಇಂದು ಭೇಟಿ ನೀಡಿದಾಗ ಇಲ್ಲಿನ ಸ್ವಚ್ಚತೆ ಮತು ವ್ಯವಸ್ಥೆ ನೋಡುವಾಗ ಖಾಸಗಿ ಆಸ್ಪತ್ರೆ ಹೋಲುವ ರೀತಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಉಪಸ್ಥಿತರಿದ್ದ ಲಯನ್ಸ್ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ವಸಂತ ಶೆಟ್ಟಿ ಮಾತನಾಡಿ, ವಾರ್ಷಿಕವಾಗಿ ಹಮ್ಮಿಕೊಂಡ ಕಾರ್ಯಕ್ರಮದ ವಿವರ ನೀಡಿದರು. ಮಾಧ್ಯಮದವರ ಸಹಕಾರ ನೆನೆದುಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಅನಿತಾ ಗೂಮ್ಸ್, ತಾಲೂಕು ಘಟಕದ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಕೋಶಾಧಿಕಾರಿ ರಾಜೀವ ಡಿ ಗೌಡ, ಪ್ರಮುಖರಾದ ಧರಣೇಂದ್ರ ಕುಮಾರ್, ಕೃಷ್ಣ ಆಚಾರ್, ಧತ್ತಾತ್ರೇಯ ಗೊಲ್ಲ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.