ಡೈಲಿಫ್ರೆಶ್ ಫುಡ್ ಪ್ರೊಡಕ್ಟ್ ಶುಭಾರಂಭ

ಉಜಿರೆ: ಇಲ್ಲಿಯ ಶಿವಾಜಿನಗರದಲ್ಲಿ ಡೈಲಿಫ್ರೆಶ್ ಫುಡ್ ಪ್ರೊಡಕ್ಟ್ ಇದರ ಶುಭಾರಂಭವು ಡಿ.1 ರಂದು ಜರುಗಿರು.
ಕನ್ಯಾಡಿ ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀ ರಾಮಕ್ಷೇತ್ರದ ಮಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಉದ್ಘಾಟನೆಯನ್ನು ನೆರವೇರಿಸಿ ದೈನಂದಿನ ಜೀವನಕ್ಕೆ ಬೇಕಾದ ಆಹಾರ ಇಲ್ಲಿ ತಯಾರಾಗುತ್ತದೆ. ಈಗಿನ ಈ ಕಾಲದ ಕೆಲಸದ ಒತ್ತಡದಲ್ಲಿ ಸತಿ-ಪತಿ ಉದ್ಯೋಗದಲ್ಲಿದ್ದು ಬೆಳಗಿನ ಆಹಾರ ಬಹು ಸುಲಭದಲ್ಲಿ ತಯಾರಾದರೆ ಅದುವೇ ದೊಡ್ಡ ಪುಣ್ಯದ ಕೆಲಸ ಎಂಬ ಭಾವನೆ ಎಲ್ಲರದು. ಈ ದೃಷ್ಟಿಯಲ್ಲಿ ಪ್ರಾರಂಭಿಸಿದ ಈ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಕಲ್ಮಂಜ ಗ್ರಾ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೃಷ್ಣಪ್ಪ ಗುಡಿಗಾರ್, ಬಿಜೋಯಿ ಏಜೇನ್ಸಿನ ಮಾಲಕ ಎ.ಕೆ ಶಿವಾನ್ ರಮೇಶ್, ಸೈಂಟ್ ಸೆಬಾಸ್ಟಿಯನ್ ಇಂಜಿನಿಯರಿಂಗ್ ವರ್ಕ್ಸ್‌ನ ಆಂಟನಿ ಮೊದಲಾದವರು ಉಪಸ್ಥಿತರಿದ್ದರು.
ಶ್ರೀಮತಿ ಸುನಿತಾ ಬೈಜು, ಬೈಜು ಎನ್.ಎಸ್, ಕು| ಬಿನಿಶಾ ಬೈಜು, ಅದ್ವೀಶ್ ಬೈಜು ಸ್ವಾಮೀಜಿಯವನ್ನು ಗೌರವಿಸಿದರು. ಹೊಲ್ಡ್ ಪಿಂಟೋ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು. ಇಲ್ಲಿ ಚಪಾತಿ ಪೂರಿ, ಪರೋಟ, ಚಿಪ್ಸ್, ರೊಟ್ಟಿ, ಮೊದಲಾದ ಆಹಾರ ತಯಾರಾಗಿ ಮಾರುಕಟ್ಟೆಯಲ್ಲಿ ದೊರೆಯಲಿದೆ ಎಂದು ಬೈಜುರವರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.