ಬೆಳ್ತಂಗಡಿ: ವಿದ್ಯುತ್ಶಕ್ತಿ ಬಳಕೆದಾರರ ಕೃಷಿಕರ ಸಂಘದ ವತಿಯಿಂದ ತಾಲೂಕಿನ ನೆರೆ ಸಂತ್ರಸ್ತರ ನೆರವಿಗಾಗಿ ತೆರೆದಿರುವ “ಕಾಳಜಿ ಫ್ಲಡ್ ರಿಲೀಫ್ ಫಂಡ್” ಗೆ 10 ಸಾವಿರದ 10 ರೂ. ದೇಣಿಗೆ ಹಸ್ತಾಂತರಿಸಲಾಯಿತು. ಸುಮಾರು 1500ರಷ್ಟು ಸದಸ್ಯರನ್ನೊಳಗೊಂಡ ತಾಲೂಕಿನ ವಿದ್ಯುತ್ಶಕ್ತಿ ಬಳಕೆದಾರರ ಕೃಷಿಕರ ಸಂಘದ ಗೌರವ ಅಧ್ಯಕ್ಷ ಜಯರಾಂ ಶೆಟ್ಟಿ ಪಡಂಗಡಿ ಮತ್ತು ಗೌರವ ಕಾರ್ಯದರ್ಶಿ ಸುದರ್ಶನ ರಾವ್ ಗಜಂತೋಡಿ ಅವರು ಸದ್ರಿ ದೇಣಿಗೆ ಮೊತ್ತದ ಚೆಕ್ಕ್ ಅನ್ನು ಶಾಸಕ ಹರೀಶ್ ಪೂಂಜ ಅವರಿಗೆ ನೀಡಿದರು. ಸ್ವೀಕರಿಸಿದ ಶಾಸಕರು ಸಂಘದ ಕಾಳಜಿಗೆ ಕೃತಜ್ಞತೆ ಸಲ್ಲಿಸಿದರು.