HomePage_Banner_
HomePage_Banner_

ಶಿಬಾಜೆ ಗ್ರಾಮದ ಪೆರ್ಲ ಸರಕಾರಿ ಶಾಲೆ ಬಾವಿಗೆ ವಿಷ ಶಂಕೆ: 8 ಮಕ್ಕಳು ಅಸ್ವಸ್ಥ

ಶಿಬಾಜೆ: ಶಿಬಾಜೆ ಗ್ರಾಮದ ಪೆರ್ಲ ಸರಕಾರಿ ಶಾಲಾ ಕುಡಿಯುವ ನೀರಿನ ಬಾವಿಗೆ ದುಷ್ಕರ್ಮಿಗಳು ವಿಷ ಹಾಕಿದ್ದಾರೆಂಬ ಶಂಕೆ ಇದ್ದು, ಇದರಿಂದ ನೀರು ಸೇವಿಸಿದ ಎಂಟು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಡಿ.2 ರಂದು ನಡೆದಿದೆ.
ಅನಾರೋಗ್ಯಕ್ಕೆ ತುತ್ತಾಗಿರುವ ಮಕ್ಕಳನ್ನು ಈಗಾಗಲೇ ಬೆಳ್ತಂಗಡಿ ಮತ್ತು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿಗೆ ದಾಖಲಾದ ಮಕ್ಕಳನ್ನು ಸುದೀಶ್, ಸುದೀಪ್,ಯೋಗೀಶ್ ಮತ್ತು ಚೇತನ್ ಕುಮಾರ್ ಎಂಬವರೆಂದು ಗುರುತಿಸಲಾಗಿದೆ. ಉಳಿದ ಮಕ್ಕಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿದ್ದಾರೆ.

ಶಾಲಾ ಮುಖ್ಯ ಶಿಕ್ಷಕಿ ಶಾರದಾ ಅವರು ಸಹಶಿಕ್ಷಕರಾದ ನಮಿತಾ ಮತ್ತು ಅರವಿಂದ ಗೋಖಲೆ ಅವರ ಸಹಾಯದೊಂದಿಗೆ 108 ಅಂಬುಲೆನ್ಸ್ ಮೂಲಕ ಕೊಕ್ಕಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರಿಗೆ ಕರೆದೊಯ್ದಿದಿದ್ದಾರೆ.

4 ವಿಧ್ಯಾರ್ಥಿಗಳನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಅವರನ್ನು ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿ ಕೊಡಲಾಗಿದೆ.  ಅಸ್ವಸ್ಥ ಮಕ್ಕಳ ಜೀವಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಎಂದು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ.

7ನೇ ತರಗತಿ ವಿದ್ಯಾರ್ಥಿ ಚೇತನ್ ಕುಮಾರ್(13ವ), 8ನೇ ತರಗತಿ ವಿದ್ಯಾರ್ಥಿಗಳಾದ ಸುದೀಶ್(14ವ), ಯೋಗೀಶ್(14ವ), ರಾಧಾಕೃಷ್ಣ(14ವ), 6ನೇ ತರಗತಿ ವಿದ್ಯಾರ್ಥಿಗಳಾದ ಸುದೀಪ್(12ವ), ರಾಜೇಶ್(12ವ), ಮೋನಿಸ್(12ವ) ಹಾಗೂ ಶ್ರವಣ್(12ವ) ಅಸ್ವಸ್ಥಗೊಂಡವರಾಗಿದ್ದಾರೆ.

ಶಾಲೆಯ ಬಾವಿಯ ಬಳಿ ವಿಷದ ಕ್ಯಾನ್ ದೊರೆತಿದೆ ಎನ್ನಲಾಗಿದ್ದು, ಇದರಿಂದ ವಿಷಪ್ರಾಶನ ಮೇಲ್ನೋಟಕ್ಕೆ ಖಚಿತಗೊಂಡಿದೆ. ಘಟನೆಯ ವಿವರ ತಿಳಿಯುತ್ತಿದ್ದಂತೆ ಶಿಕ್ಷಣ ಇಲಾಖೆಯಿಂದ ಸುಭಾಷ್ ಜಾದವ್, ಭುವನೇಶ್ ಇವರು ಶಾಲೆಗೆ ಭೇಟಿ ನೀಡಿದ್ದಾರೆ. ಧರ್ಮಸ್ಥಳ ಠಾಣಾ ಎಸ್. ಐ ಓಡಿಯಪ್ಪ ಅವಗೂ ತಮ್ಮ ಸಿಬ್ಬಂದಿಗಳೊಂದಿಗೆ ಶಾಲೆಗೆ ತೆರಳಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಘಟನೆಯ ವಿಚಾರ ಹರುಡತ್ತಿದ್ದಂತೆ ಮಕ್ಕಳ ಹೆತ್ತವರು, ಪೋಷಕರು ಆತಂಕದಿಂದ ಶಾಲೆಯಲ್ಲಿ ಜಮಾಯಿಸಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಇದೀಗ ಅಧಿಕಾರಿಗಳು, ಪೊಲೀಸ್ ಇಲಾಖೆ ಜಂಟಿಯಾಗಿ ಮಾತುಕತೆ ನಡೆಸಿ ಮಕ್ಕಳ ಹೆತ್ತರನ್ನು ಸಮಾಧಾನಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಕ್ರೀಡಾಂಗಣದಲ್ಲಿ ಹೊರಗಿನವರಿಂದ ಆಟ: ಪೈಪ್‍ಗಳಿಗೆ ನಿರಂತರ ಹಾನಿ
ಇದೇ ಶಾಲಾ ಕ್ರೀಡಾಂಗಣದಲ್ಲಿ  ನೀರಿನ ಪೈಪ್‍ಗಳನ್ನು ಅನ್ಯಾಯವಾಗಿ ಒಡೆದುಹಾಕುವುದು, ನಿರಂತರ ನಡೆಯುತ್ತಿತ್ತು.ಹಲುವ ಬಾರಿ ಪೈಪ್ ಲೈನ್ ದುರಸ್ಥಿ ಮಾಡಲಾಗಿದ್ದರೂ ಕಿಡಿಗೇಡಿಗಳು ಮತ್ತೆ ಮತ್ತೆ ಅದನ್ನು ಒಡೆದುಹಾಕುತ್ತಿದ್ದರು. ಈ ಬಗ್ಗೆ ಶನಿವಾರವಷ್ಟೇ ಶಾಲಾ ಎಚ್.ಎಂ ಶಾರದಾ ಅವರು ಅಕ್ಷರದಾಸೋಹ ವಿಭಾಗಕ್ಕೆ ದೂರು ಸಲ್ಲಿಸಿದ್ದುರೆಂದು ತಿಳಿದುಬಂದಿದೆ. ಈ ಬಗ್ಗೆ ಎಸ್ಡಿಎಂಸಿ ಸಮನ್ವಯ ವೇದಿಕೆ ಕಡೆಯಿಂದ ಎಸ್‌ಡಿಎಂಸಿ ಅಧ್ಯಕ್ಷ ವೆಂಕಪ್ಪ ಗೌಡ ಪೆಲ‍್ ಅವರಿಗೆ ಸಲಹೆ ನೀಡಿದ್ದು , ಕಿಡಿಗೇಡಿಗಳಿಂದ ಅಪಾಯದ ಶಂಕೆ ಇದ್ದು ಪೊಲೀಸ್ ದೂರು ನೀಡುವಂತೆ ತಿಳಿಸಲಾಗಿತ್ತು. ಅದಾಗ್ಯೂ ಎಸ್ ಡಿಎಂಸಿ ಸಮನ್ವಯ ವೇದಿಕೆಯ ಸಂಘಟಕ ಶ‍್ರೀಧರ ರಾವ್ ಕಳೆಂಜ ಅವರು ಈ ಬಗ್ಗೆ ಧರ್ಮಸ್ಥಳ ಠಾಣೆಗೆ ಮೌಖಿಕ ಮಾಹಿತಿ ನೀಡಿದ್ದು, ಈ ಭಾಗಕ್ಕೆ ಬೀಟ್ ಪೊಲೀಸ್ ಇಲ್ಲ, ಇಲ್ಲಿ ಕರ್ತವ್ಯ ನಿರ್ವಹಿಸಬೇಕಾದವರು ಚಾರ್ಮಾಡಿ ಚೆಕ್ ಪೋಸ್ಟ್‌ನಲ್ಲಿದ್ದಾರೆ ಎಂಬ ಉತ್ತರ ಪೊಲೀಸ್ ಇಲಾಖೆಯಿಂದ ಬಂದಿತ್ತು ಎಂದು ಹೇಳಲಾಗಿದೆ.


ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಕುಮಾರ್ ಪಿ.ಜಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸದರಿ ಬಾವಿಯ ನೀರನ್ನು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.