ಕಳಿಯ ಮಂಜಲಡ್ಕಪದವು – ಕುದುರೆ ಕಲ್ಲು ಡಾಮಾರೀಕರಣ ರಸ್ತೆಗಾಗಿ ಅಗ್ರಹ

ಕಳಿಯ ಗ್ರಾಮದ ವ್ಯಾಪ್ತಿಯಲ್ಲಿರುವ ಮಂಜಲಡ್ಕ ಪದವು-ಕುದುರೆ ಕಲ್ಲು ಗೇರುಕಟ್ಟೆಗೆ ಬೈಪಾಸ್ ಸಂಪರ್ಕ ರಸ್ತೆಯಾಗಿ ಸುಮಾರು 100 ಕ್ಕೂ ಹೆಚ್ಚು ವರ್ಷಗಳ ಹಿಂದಿನ ರಸ್ತೆಯಾಗಿದೆ.ಗೇರುಕಟ್ಟೆ ಪೇಟೆ,ರಾಷ್ಟ್ರೀಕೃತ ಬ್ಯಾಂಕ್,ಸಹಕಾರಿ ಸಂಘ, ಕಳಿಯ ಗ್ರಾಮ ಪಂಚಾಯತ,ಹಾಲು ಉತ್ಪಾದಕರ ಸಂಘ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಇರುವುದರಿಂದ ವಿಧ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಹತ್ತಿರದ ಸಂಪರ್ಕ ರಸ್ತೆಯಾಗಿದೆ.


ಕೊಯ್ಯೂರು,ಎರುಕಡಪ್ಪು ಕಡೆಯಿಂದ ಬರುವ ಜನರು – ಪರಪ್ಪು ಡಾಮಾರಿಕರಣ ರಸ್ತೆಯ ಮೂಲಕ ಗೇರುಕಟ್ಟೆಗೆ ಅಂದಾಜು 2 ಕಿಲೋಮೀಟರ್ ದೂರವನ್ನು ಬಳಸಿ ಬರ ಬೇಕಾಗುತ್ತದೆ.ಕುದುರೆಕಲ್ಲು-ಮಂಜಲಡ್ಕ ಪದವು ಬೈಪಾಸ್ ರಸ್ತೆಯ ಮೂಲಕ ಕೇವಲ 1 ಕಿಲೋಮೀಟರ್ ಗೂ ಕಡಿಮೆ ದೂರದಲ್ಲಿ ಗೇರುಕಟ್ಟೆ ಪೇಟೆಯನ್ನು ತಲುಪಲು ಸಹಕಾರಿಯಾಗುತ್ತದೆ. ಹಾಲು ಉತ್ಪಾದಕರ ಸಂಘ,ಕಳಿಯ ಪಂಚಾಯತು, ಶಾಲಾ-ಕಾಲೇಜುಗಳಿಗೆ ವಿಧ್ಯಾರ್ಥಿಗಳು, ಕೃಷಿಕರು, ಹೈನುಗಾರಿಕೆ ಕೃಷಿಕರು,ಗ್ರಾಮಸ್ಥರು ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಜನರು ದಿನಂಪ್ರತಿ, ನೂರಾರು ವಾಹನ ಗಳು ಓಡಾಡುವುದರಿಂದ ಪ್ರತಿಯೊಬ್ಬರಿಗೂ ಅನುಕೂಲವನ್ನು ಕಲ್ಪಿಸುತ್ತದೆ.ಕಳೆದ ಮಳೆಗಾಲದಲ್ಲಿ ದೊಡ್ಡ-ದೊಡ್ಡ ಗುಂಡಿ,ಹಳ್ಳಗಳಲ್ಲಿ ಮೊಣಕಾಲಿನ ನಷ್ಟು ಕೇಸರು ನೀರು ತುಂಬಿದ ರಸ್ತೆಯ ಮೂಲಕ ವಿಧ್ಯಾರ್ಥಿಗಳು,ಕೃಷಿಕರು ಹಾಗೂ ನಾಗರಿಕರು ಎದ್ದು-ಬಿದ್ದು ನಡೆದಾಡಿದ ಕಷ್ಟ ಅನುಭವಿಸಿದವರಿಗೆ ಗೊತ್ತು. ಅದುದರಿಂದ ಜನ ಪ್ರತಿ ನಿಧಿಗಳಾದ ಶಾಸಕರು, ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಕಳಿಯ ಗ್ರಾಮ ಪಂಚಾಯತ ಅಧ್ಯಕ್ಷ -ಸದಸ್ಯರು,ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಸಂಪರ್ಕ ತಕ್ಷಣ ರಸ್ತೆಯನ್ನು ಡಾಮಾರೀಕರಣ ಗೊಳಿಸಿ, ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸುವಂತೆ ಗ್ರಾಮಸ್ಥರ ಒತ್ತಾಯವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.