ಬೆನ್ನುಮೂಳೆ ಮುರಿದ ರೋಗಿಗೆ ನೆರವಾಗಲು ಬಸ್ಟ್ಯಾಂಡ್‌ನಲ್ಲಿ ನೀರಿನ ಬಾಟಲಿ ಮಾರಾಟ ಮಾಡಿದ ರಾಜಕೇಸರಿ ಕಾರ್ಯಕರ್ತರು

ಬೆಳ್ತಂಗಡಿ: ಕೂಲಿ ಮಾಡುವ ವೇಳೆ ಮರದಿಂದ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾದ ಕಡಿರುದ್ಯಾವರ ಗ್ರಾಮದ ನರ್ಥಂಡ ನಿವಾಸಿ ಅನಿಲ್ ನಾಯ್ಕ ಅವರ ಚಿಕಿತ್ಸೆಗೆ ಸಹಕಾರಿಯಾಗುವಂತೆ ರಾಜಕೇಸರಿ ದ.ಕ ಜಿಲ್ಲೆ ವತಿಯಿಂದ ಬೆಳ್ತಂಗಡಿ ಪ್ರಯಾಣಿಕರ ತಂಗುದಾಣದಲ್ಲಿ ನೀರಿನ ಬಾಟಲಿ ಮಾರಾಟ ಮಾಡಿ ದೇಣಿಗೆ ಸಂಗ್ರಹಿಸಲಾಯಿತು.


ಬೆಳ್ತಂಗಡಿಯ ನೂತನ ಸಬ್‌ಇನ್ಸ್‌ಪೆಕ್ಟರ್ ನಂದ ಕುಮಾರ್ ಮತ್ತು ಪತ್ರಕರ್ತರ ಸಂಘದ ಕಾರ್ಯದರ್ಶಿ ಲ| ಅಶ್ರಫ್ ಆಲಿಕುಂಞಿ ಅವರು ವಿಶೇಷ ಮೊತ್ತ ನೀಡುವ ಮೂಲಕ ಪ್ರಥಮ ಭಾಟಲಿ ಖರೀದಿ ಮಾಡಿ ಚಾಲನೆ ನೀಡಿದರು. 

ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ, ತಾಲೂಕು ಅಧ್ಯಕ್ಷ ಲೋಕೇಶ್ ಕುತ್ಲೂರು, ಜಿಲ್ಲಾ ಸಂಚಾಲಕ ಲೋಕೇಶ್ ಸಬರಬೈಲು, ತಾ| ಸಂಚಾಲಕ ಪ್ರವೀಣ್, ಉಜಿರೆ ಘಟಕದ ಅಧ್ಯಕ್ಷ ಪ್ರವೀಣ್ ಉಜಿರೆ, ಬಂಟ್ವಾಳ ಘಟಕದ  ಅಧ್ಯಕ್ಷ ಪ್ರದೀಪ್ ಪೂಜಾರಿ, ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರದ ಸಂಚಾಲಕ ದೇವದಾಸ್ ಸಾಲಿಯಾನ್, ಸಂಘಟನಾ ಪ್ರಮುಖ ಕಾರ್ಯಕರ್ತರಾದ ಶರತ್, ಗಣೇಶ್, ದೀಕ್ಷಿತ್, ಕವನ್, ಪ್ರತೀಕ್ ಪಣಕಜೆ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.