ಮಚ್ಚಿನ: ಇಲ್ಲಿಯ ಮಡಂತ್ಯಾರು ಸಮೀಪವಿರುವ ತುಳುನಾಡಿನ ಪ್ರಸಿದ್ಧ ನಾಗಕ್ಷೇತ್ರ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜ.
ಈ ಕ್ಷೇತ್ರದ ಸೊಬಗಿಗೆ ತಕ್ಕಂತೆ ಇಲ್ಲಿ ಶ್ರೀ ಅನಂತೇಶ್ವರ ದೇವರ ದಿವ್ಯ ಸನ್ನಿಧಿ ಇದ್ದು, ಭಕ್ತ ಜನರ ಇಷ್ಟಾರ್ಥವನ್ನು ಈಡೇರಿಸುವ ಶ್ರದ್ಧಾ ಕೇಂದ್ರವಾಗಿರುತ್ತದೆ. ಪ್ರತೀ ವರ್ಷದಂತೆ ನಡೆಯುವ ಷಷ್ಠೀ ಮಹೋತ್ಸವವು ಇಂದು ಡಿ.2ರಂದುವಿಜೃಂಭಣೆಯಿಂದ ನಡೆಯಿತು.
ಡಿ.2 ರಂದು ಬೆಳಿಗ್ಗೆ ಷಷ್ಠೀ ಉತ್ಸವ ಪ್ರಾರಂಭಗೊಂಡು, ಮಧ್ಯಾಹ್ನ 11ಕ್ಕೆ ಬ್ರಹ್ಮರಥೋತ್ಸವ ಮಹಾಪೂಜೆ, ಮಹಾಅನ್ನಸಂತರ್ಪಣೆ, ರಾತ್ರಿ ದರ್ಶನ ಬಲಿ ಉತ್ಸವ, ಡಿ.3 ರಂದು ಮಹಾಸಂಪ್ರೋಕ್ಷಣೆ ನಡೆಯಲಿದೆ. ಡಿ.29ರಂದು ಆದಿತ್ಯವಾರ ಶೇಷ-ನಾಗ ಜೋಡು ಕರೆ ಕಂಬಳ ನಡೆಯಲಿದೆ ಎಂದು ಕ್ಷೇತ್ರದ ಅನುವಂಶಿಯ ಆಡಳಿತ ಮೊಕ್ತೇಸರ ಡಾ| ಯಂ. ಹರ್ಷ ಸಂಪಿಗೆತ್ತಾಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.