ಕಣಿಯೂರು ಗ್ರಾ.ಪಂ ಅಧ್ಯಕ್ಷ ಸುನಿಲ್ ಸಾಲಿಯಾನ್ ವಿರುದ್ದ ಪದ್ಮುಂಜದಲ್ಲಿ ಬೃಹತ್ ಪ್ರತಿಭಟನೆ

Advt_NewsUnder_1
Advt_NewsUnder_1
Advt_NewsUnder_1

 


ಪದ್ಮುಂಜ: ಪಂಚಾಯತ್ ಸದಸ್ಯ ಸೀತಾರಾಮ ಮಡಿವಾಳರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಕೆ ಕೆ ಶಾಹುಲ್ ಹಮೀದ್ ರವರು ಮಾತನಾಡಿ ಪಂ ಸಿಬ್ಬಂದಿ ಕಾಸಿಂ ಪದ್ಮುಂಜ ರವರನ್ನು ಕಾನೋನು ಬಾಹಿರವಾಗಿ ವಜಾ ಮಾಡಿ ಹಾಗು ಕಾಸಿಂ ರವರ ಸಹಿ ನಕಲಿ ಮಾಡಿ ಸುಳ್ಳು ದಾಖಲೆ ಸೃಷ್ಟಿಸಿ ಕಾಸಿಂ ರವರನ್ನು ವಂಚಿಸಿದ್ದಲ್ಲದೆ ನ್ಯಾಯಾಲಯಕ್ಕೂ ವಂಚನೆ ಮಾಡಿದ ಪಂ ಅಧ್ಯಕ್ಷ ಸುನಿಲ್ ಸಾಲಿಯಾನ್ ಮೋಸದ ತಂತ್ರಗಾರಿಕೆಯನ್ನು ತೀವ್ರವಾಗಿ ಖಂಡಿಸಿದರಲ್ಲದೆ ಇಂತಾ ಮೋಸಗಾರನಿಗೆ ಕಠಿನ ಶಿಕ್ಷೆಯಾಗಬೇಕು ಎಂದರು. ಪಂಚಾಯತ್ ಸದಸ್ಯ ಸೀತಾರಾಮ ಮಡಿವಾಳ ರವರು ಪ್ರಾಸ್ತಾವಿಕ ಮಾತನಾಡಿದರು.


ಈ ಸಂದರ್ಭ ಮಾಜಿ ತಾ.ಪಂ ಸದಸ್ಯ ಮಾಯಿಲ್ತೋಡಿ ಈಶ್ವರ ಭಟ್, ಪಂ ಸದಸ್ಯ ಅಬ್ದುಲ್ ಶುಕುರ್, ಪಂ ಸದಸ್ಯರಾದ ಯಶೋದರ ಶೆಟ್ಟಿ. ಸೋಮಯ ನಾಯ್ಕ ಗ್ರಾಮಸ್ಥರಾದ ಶೇಖರ ಶೆಟ್ಟಿ. ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಯ್ಯೂಬ್ ಕರಾಯ, ಪ್ರೇಮನಾಥ ಶೆಟ್ಟಿ ಹಾಗು ಇನ್ನಿತರ ಗಣ್ಯ ವ್ಯಕ್ತಿಗಳು ಉಪಸ್ತಿತರಿದ್ದರು. ಸಿ ಎ ಬ್ಯಾಂಕ್ ಸಮೀಪದಿಂದ ಮೆರವಣಿಗೆಯಲ್ಲಿ ಬಂದ ಗ್ರಾಮಸ್ಥರು ಗ್ರಾಮ ಪಂಚಾಯತ್ ಎದುರುಗಡೆ ಪ್ರತಿಭಟನೆ ನಡೆಸಿದರು ಸೀತಾರಾಮ ಮಡಿವಾಳರವರು ಸ್ವಾಗತಿಸಿ ವಂದಿಸಿದರು.

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.