ಮಾರಿಗುಡಿ ಹರಕೆ ಸೇವೆಗಳಲ್ಲಿಯಾವುದೇ ಬದಲಾವಣೆ ಇಲ್ಲ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿಯ ಪೇಟೆಯಲ್ಲಿರುವ ಶ್ರೀ ಮಹಾಮ್ಮಾಯಿ ಮಾರಿಗುಡಿ ಬಹಳ ಪುರಾತನವಾಗಿದ್ದು, ಆಸ್ತಿಕರ ಇಷ್ಟಾರ್ಥಕ್ಕಾಗಿ ನೂರಾರು ವರ್ಷಗಳಿಂದ ಹಿಂದೂ ಸಂಪ್ರದಾಯದಂತೆ ಕೋಳಿ ಬಲಿ ನಡೆದುಕೊಂಡು ಬಂದಿದೆ. ಈ ಹರಕೆ ಸೇವೆಯನ್ನು ಕಾನೂನಿನ ಅಡಿಯಲ್ಲಿ ನಿಲ್ಲಿಸುವಂತೆ ಷಡ್ಯಂತ್ರ ನಡೆಯುತ್ತಿದ್ದು ಅದನ್ನು ವಿರೋದಿಸುತ್ತೇವೆ‌ ಈಗ ಅಪಪ್ರಚಾರ ಆಗಿರುವಂತೆ ಕ್ಷೇತ್ರದಲ್ಲಿ ನಡೆಯುವ ಯಾವುದೇ ಹರಕೆ ಸೇವೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಕ್ತರ ಮಂಡಳಿ ಸ್ಪಷ್ಟೀಕರಣ ನೀಡಿದೆ.
ನ.29 ರಂದು ಪ್ರೆಸ್ ಕ್ಲಬ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ‌ ಮಾಹಿತಿ ನೀಡಿದರು.

ಮಾರಿಗುಡಿಯಲ್ಲಿ ಪ್ರಾಣಿ ಬಲಿ‌ನಡೆಯುತ್ತಿದೆ ಎಂದು ಅನಾಮದೇಯ ದೂರು ಬಂದ ಹಿನ್ನಲೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಇತ್ತೀಚೆಗೆ ಮಾರುಗುಡಿಗೆ ಭೇಟಿ ನೀಡಿ, ಇಲ್ಲಿ ಯಾವುದೇ ರೀತಿ ಪ್ರಾಣಿ ಬಲಿ ನಡೆಯಬಾರದು ಎಂದು ಮೌಖಿಕವಾಗಿ ಆದೇಶ ನೀಡಿದರು. ಇದರ ಹಿನ್ನಲೆಯಲ್ಲಿ ಭಕ್ತರಲ್ಲಿ ಗೊಂದಲ, ತಪ್ಪು ಸಂದೇಶ ರವಾನೆಯಾಗಿದೆ ಎಂದು ಮಾರಿಗುಡಿ ಭಕ್ತರು ತಿಳಿಸಿದ್ದಾರೆ.
ಈ ಕ್ಷೇತ್ರದಲ್ಲಿ ಯಾವುದೇ ಪ್ರಾಣಿ ಬಲಿ ನಡೆಯುವುದಿಲ್ಲ. ಭಕ್ತರ ಹರಕೆ ರೂಪದಲ್ಲಿ ಕೋಳಿ ಬಲಿ ಸೇವೆ ಮಾತ್ರ ನಡೆಯುತ್ತದೆ. ಇನ್ನು ಮುಂದೆ ಕೂಡ ಯಾವುದೇ ಬದಲಾವಣೆ ಇಲ್ಲದೇ ಕೋಳಿ ಬಲಿ ಸೇವೆ ನಿರಂತರವಾಗಿ ನಡೆಯುತ್ತದೆ ಎಂದು‌ ತಿಳಿಸಿದರು. ಗೋಷ್ಠಿಯಲ್ಲಿ ನುಜೋಡಿ ಗುತ್ತು ಪ್ರಮೋದ್ ಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಮುಡಾಯಿಗುತ್ತು ದಾಮೋದರ ಬಂಗೇರ , ಅರ್ಚಕ ಯುವರಾಜ ಹೆಗ್ಡೆ, ಜನಾರ್ದನ ಬಂಗೇರ, ಸಚಿನ್ ಕುಮಾರ್ ನುಜೋಡಿ, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.